ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಕೊರಿಯನ್ ಜನಪ್ರಿಯ ನಟಿ ಪಾರ್ಕ್ ಸೂ ಯನ್ ಸಾವನ್ನಪ್ಪಿದ್ದಾರೆ .
ಮೆಟ್ಟಿಲುಗಳಿಂದ ಆಯಾ ತಪ್ಪಿ ಬಿದ್ದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಬ್ರೇನ್ ಡೆಡ್ ಆದ ಕಾರಣದಿಂದಾಗಿ ವೈದ್ಯರಿಗೆ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ.
ಆಕೆ ಸಾವನ್ನಪ್ಪಿದ ಬಳಿಕ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಟಿಯ ತಾಯಿ, ‘ನನ್ನ ಮಗಳ ಹೃದಯ ಬಿಡಿತ ಇನ್ನೂ ಹಾಗೆಯೇ ಇದೆ. ಬ್ರೈನ್ ಡೆಡ್ ಆಗಿದೆ. ಹಾಗಾಗಿ ಆಕೆಯ ಅಂಗಾಂಗಗಳು ಅಗತ್ಯ ಇರುವವರಿಗೆ ಉಪಯೋಗಕ್ಕೆ ಬರಲಿ. ಈ ಮೂಲಕ ನನ್ನ ಮಗಳು ಕೂಡ ಜೀವಂತವಾಗಿ ಇರುತ್ತಾಳೆ ಎನ್ನುವ ಸಮಾಧಾನ ನಮಗೂ ಇರಲಿದೆ’ ಎಂದಿದ್ದಾರೆ.
1994ರಲ್ಲಿ ಪಾರ್ಕ್ ಜನಿಸಿದ್ದು ಈಗ ಅವರಿಗೆ ಕೇವಲ 29 ವರ್ಷ ಮಾತ್ರ. ದಿ ಸೆಲ್ಲರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪಾರ್ಕ್, ಅತೀ ಸಣ್ಣ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿದ್ದಾರೆ.