ಹೊಸದಿಗಂತ ಡಿಜಿಟಲ್ ಡೆಸ್ಕ್:
ಉರ್ಫಿ ಜಾವೇದ್ ಬಟ್ಟೆ ಹಾಕೋ ರೀತಿಯನ್ನು ಹೊಗಳೋರು ಕಡಿಮೆ ತೆಗಳೋರೆ ಜಾಸ್ತಿ, ಈ ಸಾಲಿಗೆ ರಣ್‌ಬೀರ್ ಕಪೂರ್ ಕೂಡ ಸೇರಿದ್ದು, ಉರ್ಫಿ ಫ್ಯಾಷನ್ ಸೆನ್ಸ್ ಚೆನ್ನಾಗಿಲ್ಲ, ಅವರದ್ದು ಕೆಟ್ಟ ಟೇಸ್ಟ್ ಎಂದು ರಣ್‌ಬೀರ್ ಹೇಳಿದ್ದರು.
ಈ ಬಗ್ಗೆ ಉರ್ಫಿಗೆ ಪ್ರಶ್ನೆ ಎದುರಾಗಿದ್ದು, ರಣ್‌ಬೀರ್ ಬಗ್ಗೆ ಉರ್ಫಿ ಕೂಡ ಜೋರಾಗಿಯೇ ಮಾತನಾಡಿದ್ದಾರೆ. ರಣ್‌ಬೀರ್ ಕಪೂರ್ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದಾರೆ. ಕರೀನಾ ಕಪೂರ್ ಶೋನಲ್ಲಿ ರಣ್‌ಬೀರ್ ಬ್ಯಾಡ್ ಟೇಸ್ಟ್ ಎಂದು ಉರ್ಫಿ ಬಗ್ಗೆ ಹೇಳಿದ್ದರು. ಆದರೆ ಕರೀನಾ ಅವರನ್ನು ಹೊಗಳಿದ್ದು, ಏನೇ ಮಾಡೋದು ಧೈರ್ಯ ಬೇಕು ಎಂದಿದ್ದರು.
ರಣ್‌ಬೀರ್ ಕ್ಯಾನ್ ಗೋ ಟು ಹೆಲ್, ಅವರಿವರ ತೀರ್ಪು ತಗೊಂಡು ನಾನೇನು ಮಾಡಲಿ, ಕರೀನಾ ಫ್ಯಾಶನ್ ಡೀವಾ, ಅವರೇ ನನ್ನನ್ನು ಹೊಗಳಿದ್ದಾರೆ, ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದಿದ್ದಾರೆ.