BIG BOSS | ಈ ಶೋಗೆ ಹೋಗ್ಬಾರ್ದಿತ್ತು, ಇದರಿಂದ ಆರು ಬಾರಿ ಸರ್ಜರಿ ಆಗಿದೆ ಎಂದ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ಗೆ ಹೋಗಿ ಬಂದ ಸ್ಪರ್ಧಿಯೊಬ್ಬರು ತಮ್ಮ ಜೀವನದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಸೀಸನ್‌ ಮೂರರ ಕಂಟೆಸ್ಟೆಂಟ್‌ ಆಗಿದ್ದ ಸುಷ್ಮಾ ವೀರ್‌ ಬಿಗ್‌ ಬಾಸ್‌ ಕಾರ್ಯಕ್ರಮದಿಂದ ತಮಗಾದ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ನನ್ನ ಸೀಸನ್‌ನಲ್ಲಿ ಯಾವ ಕಂಟೆಸ್ಟೆಂಟ್‌ಗಾದ್ರೂ ಕೇಳಿ, ನನ್ನ ಮಾತ್ರೆಗಳನ್ನು ಕೊಡೋದನ್ನು ನಿಲ್ಲಿಸಿಬಿಟ್ಟರು. ಇಲ್ಲಿಗೆ ಬರೋಕು ಮುಂಚೆಯೇ 23 ಸರ್ಜರಿಗೆ ಒಳಗಾಗಿದ್ದೆ. ಬ್ಲಟ್‌ ಕ್ಲಾಟಿಂಗ್‌ ಸಮಸ್ಯೆ ಬಗ್ಗೆ ಮುಂಚೆಯೇ ಹೇಳಿದ್ದೆ. ನನ್ನ ಮಾತ್ರೆಗಳನ್ನು ಹೋಲ್ಡ್‌ ಮಾಡಿದ್ದರು. ಎಸಿಲಿ ಇರುವಂತೆ ಇರಲಿಲ್ಲ, ನೀರಿನಲ್ಲಿ ಇಳಿಯುವಂತಿರಲಿಲ್ಲ. ಆದರೆ ಟಾಸ್ಕ್‌ ಮುಖಾಂತರ ಎಲ್ಲವನ್ನೂ ಮಾಡಿಸಿದರು.

ಹೀಮೋಗ್ಲೊಬಿನ್‌ ಲೆವೆಕ್‌ ತುಂಬಾ ಕಡಿಮೆ ಆಗಿತ್ತು. ಅಲ್ಲಿಂದ ಬಂದ ಮೇಲೆ ಮತ್ತೆ ಆರು ಬಾರಿ ಸರ್ಜರಿಗೆ ಒಳಗಾಗಿದ್ದೇನೆ ಎಂದು ಸುಷ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!