ಸಾಮಾಗ್ರಿಗಳು
ರಾಗಿ
ಕಿನೋವಾ
ಹೆಸರುಕಾಳು
ಕಡ್ಲೆಕಾಳು
ಸಜ್ಜೆ
ಬಾರ್ಲಿ
ಜೀರಿಗೆ
ಮೆಂತ್ಯೆ
ಕಾಳುಮೆಣಸು
ಇನ್ನಿತರ ಕಾಳುಗಳನ್ನು ಹಾಕಬಹುದು
ಮಾಡುವ ವಿಧಾನ
ಮೊದಲು ಬಾಣಲೆಗೆ ರಾಗಿ ಹಾಕಿ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿ
ಆನಂತರ ಕಿನೋವಾ ಹಾಕಿ ಹುರಿದುಕೊಳ್ಳಿ. ಹೀಗೆ ಪ್ರತೀ ಪದಾರ್ಥವನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ
ಎಲ್ಲವೂ ಬಿಸಿಯಾಗಿ ನಂತರ ತಣ್ಣಗಾಗಲು ಬಿಡಿ, ಆಮೇಲೆ ಇದನ್ನು ಮಿಲ್ ಮಾಡಿಸಿಕೊಂಡು ಬನ್ನಿ ಅಥವಾ ಮನೆಯಲ್ಲಿಯೇ ಪುಡಿಮಾಡಿಕೊಳ್ಳಿ
ನಂತರ ಒಂದು ಲೋಟ ನೀರಿಗೆ ಒಂದೂವರೆ ಸ್ಪೂನ್ನಷ್ಟು ರಾಗಿ ಹಿಟ್ಟು ಹಾಕಿ ಕೈಯಾಡಿಸಿ, ಸ್ವಲ್ಪ ಉಪ್ಪು ಹಾಕಿ ಕುದಿಸಿದರೆ ಗಂಜಿ ರೆಡಿ
ಇದನ್ನು ಹಾಗೇ ಕುಡಿಯಬಹುದು ಅಥವಾ ಮೊಸರು ಹಾಕಿಕೊಂಡು ಕುಡಿಯಬಹುದು, ಮುದ್ದೆ ಮಾಡಬಹುದು ಅಥವಾ ಸರಿಯ ರೀತಿ ಕೂಡ ತಿನ್ನಬಹುದು



