June 21, 2026
Sunday, June 21, 2026
spot_img

ಬಾಳು ಕಲಿಸಿದ ಸಲಹೆಗಾರ, ಎಲ್ಲ ಕೊಡಿಸುವ ಸಾಹುಕಾರ ಅಪ್ಪ……

ಪ್ರೀತಿ ವ್ಯಕ್ತಪಡಿಸೋದಕ್ಕೆ ದೊಡ್ಡ ದೊಡ್ಡ ಪದಗಳ ಅವಶ್ಯಕತೆ ಇರೋದಿಲ್ಲ. ನೀವು ತೋರಿಸೋ ಸಣ್ಣ ವರ್ತನೆ, ನಿಮ್ಮ ನಡೆ ನುಡಿ ಇವೆಲ್ಲ ನಿಮ್ಮ ಮನಸ್ಸಿನ ಭಾವನೆ ವ್ಯಕ್ತ ಪಡಿಸೋ ಒಂದು ರಹಸ್ಯ ಮಾರ್ಗ ಅಂದ್ರು ತಪ್ಪಾಗಲ್ಲ. ಇದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ಅಪ್ಪ. ದಿನವಿಡೀ ದುಡಿದು ಸುಸ್ತಾದರೂ ಮನೆಯವರಿಗಾಗಿ ಮತ್ತೆ ಎದ್ದು ನಿಲ್ಲೋದು, ಮಕ್ಕಳ ಆಸೆಗಾಗಿ ತನ್ನ ಆಸೆಗಳನ್ನು ಮರೆತುಬಿಡೋದು, ತನ್ನ ನೋವನ್ನ ಯಾರಿಗೂ ತೋರಿಸದೇ ಕುಟುಂಬದ ನಗುವಿನಲ್ಲೇ ಸಂತೋಷ ಹುಡುಕೋದು… ಇವೆಲ್ಲದರ ಹಿಂದಿರುವ ಹೆಸರು ಅಪ್ಪ.

ಅಪ್ಪ ಯಾವತ್ತೂ “ನಿನ್ನ ತುಂಬಾ ಪ್ರೀತಿಸ್ತೀನಿ” ಅಂತ ಹೇಳೋಲ್ಲ. ಆದರೆ ನಮಗೆ ಇಷ್ಟ ಆಗೋ ಒಂದು ಚಿಕ್ಕ ವಸ್ತು ಬೇಕಾದರೂ, ತನ್ನ ಅವಶ್ಯಕತೆ ಬಿಟ್ಟು ಅದನ್ನ ತಂದುಕೊಡೋದು ಅಪ್ಪ.

ನಾವು ಚೆನ್ನಾಗಿರ್ಬೇಕು ಅಂತ ದಿನವಿಡೀ ದುಡಿದು, ಮನೆಗೆ ಬಂದು ಸುಸ್ತಾಗಿದ್ದರೂ “ಊಟ ಆಯ್ತಾ?” ಅಂತ ಕೇಳೋ ಮೊದಲ ವ್ಯಕ್ತಿ ಅಪ್ಪ.

ತಮ್ಮ ಕಷ್ಟಗಳನ್ನ ಯಾರಿಗೂ ಹೇಳ್ಕೊಳಲ್ಲ. ಮನೆಯವರಿಗೆ ಏನಾದ್ರೂ ತೊಂದರೆ ಆಗ್ಬಾರದು ಅಂತ ಮೌನವಾಗಿ ಎಲ್ಲ ಭಾರವನ್ನ ಹೊತ್ತುಕೊಂಡು ಹೋಗೋರು ಅಪ್ಪ.

ಇದನ್ನೂ ಓದಿ:

ನಾವು ಕೇಳಿದ ಪ್ರತಿಯೊಂದನ್ನೂ ಕೊಡೋಕಾಗದೆ ಇದ್ದಾಗ ಅವರ ಮನಸ್ಸಿಗೆ ಎಷ್ಟು ನೋವಾಗುತ್ತೋ ಗೊತ್ತಿಲ್ಲ. ಆದರೆ ಆ ನೋವನ್ನೂ ನಗುವಿನ ಹಿಂದೆ ಮುಚ್ಚಿಟ್ಟುಕೊಳ್ಳೋರು. ಬದುಕಿನಲ್ಲಿ ನಾವು ದೊಡ್ಡವರಾದ್ಮೇಲೆ, ಅಪ್ಪನ ಬೈಗುಳದ ಹಿಂದಿದ್ದ ಪ್ರೀತಿ, ಅವರ ಮೌನದ ಹಿಂದಿದ್ದ ಕಾಳಜಿ, ಅವರ ಕೋಪದ ಹಿಂದಿದ್ದ ಜವಾಬ್ದಾರಿ ಒಂದೊಂದಾಗಿ ಅರ್ಥ ಆಗ್ತಾ ಹೋಗುತ್ತೆ.

ಕೆಲವೊಮ್ಮೆ ನಾವು ಅಮ್ಮನಿಗೆ ದಿನಕ್ಕೆ ಹತ್ತು ಸಲ “ಲವ್ ಯು” ಹೇಳ್ತೀವಿ. ಆದರೆ ಅಪ್ಪನಿಗೆ ಒಂದು ಸಲ “ಅಪ್ಪಾ, ನೀವು ತುಂಬಾ ಮುಖ್ಯ” ಅಂತ ಹೇಳೋದನ್ನ ಮರೆತುಬಿಡ್ತೀವಿ.

ಈ ಫಾದರ್ಸ್ ಡೇಗೆ ದೊಡ್ಡ ಗಿಫ್ಟ್ ಬೇಕಿಲ್ಲ. ಅವರ ಹತ್ತಿರ ಕೂತು ಸ್ವಲ್ಪ ಮಾತಾಡಿ… “ಅಪ್ಪಾ, ನೀವು ಬೆಸ್ಟ್” ಅಂತ ಹೇಳಿ ಸಾಕು.

ಯಾಕಂದ್ರೆ…

ಅಪ್ಪ ಅಂದ್ರೆ ಕೇವಲ ಒಂದು ಸಂಬಂಧ ಅಲ್ಲ… ನಮ್ಮ ಇಡೀ ಜೀವನಕ್ಕೆ ಬಲ ಕೊಡುವ ಶಕ್ತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !