ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದ ದೇಶಗಳು ಮತ್ತೊಮ್ಮೆ ಯುದ್ಧದ ಹಿಡಿತದಲ್ಲಿವೆ. ಪ್ಯಾಲೆಸ್ತೀನ್ ವಿರುದ್ಧ ಸಮರ ಸಾರಿರುವ ಇಸ್ರೇಲ್ ನೆರೆಯ ಲೆಬನಾನ್ ಮೇಲೂ ದಾಳಿ ನಡೆಸುತ್ತಿದೆ.
ಹಿಜ್ಬುಲ್ಲಾ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ಬೈರುತ್ ನಗರದಲ್ಲಿ ಇಸ್ರೇಲಿ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಹಿಜ್ಬುಲ್ಲಾ ಪಡೆಗಳು ಈ ಹಿಂದೆ ಇಸ್ರೇಲಿ ಸೇನಾ ಪ್ರಧಾನ ಕಛೇರಿಯ ಮೇಲೆ ದಾಳಿ ನಡೆಸಿದ್ದವು.
ಟೆಲ್ ಅವೀವ್ನಲ್ಲಿರುವ ಇಸ್ರೇಲಿ ಸೇನಾ ಪ್ರಧಾನ ಕಚೇರಿಯ ಮೇಲೆ ನಾವು ರಾಕೆಟ್ ಹಾರಿಸಿದ್ದೇವೆ ಎಂದು ಹಿಜ್ಬುಲ್ಲಾ ಹೇಳಿತ್ತು. ಈ ಹೇಳಿಕೆಯ ನಂತರ, ಇಸ್ರೇಲ್ ಬೈರುತ್ ಮೇಲೆ ದಾಳಿ ಮಾಡಿದೆ. ಬೈರುತ್ನ ಹಿಜ್ಬುಲ್ಲಾ ಪ್ರಾಬಲ್ಯದ ಪ್ರದೇಶಗಳನ್ನು ತೊರೆಯುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ನಂತರ ಇಸ್ರೇಲಿ ಮಿಲಿಟರಿ ಪೂರ್ವ ಬಾಲ್ಟಿಕ್ನಲ್ಲಿ ಮಾರಣಾಂತಿಕ ವೈಮಾನಿಕ ದಾಳಿಗಳನ್ನು ನಡೆಸಿದೆ.