ಹೊಸದಿಗಂತ ಡಿಜಿಟಲ್ ಡೆಸ್ಕ್:
ತ್ರಿಭಾಷಾ ನೀತಿ ಕುರಿತು ಸಿಎಂ ಎಂ.ಕೆ ಸ್ಟಾಲಿನ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡುವಿನ ವಿವಾದ ಮುಂದುವರೆದಿದೆ.
ಲೋಕಸಭೆಯಲ್ಲಿ ಮಾತನಾಡಿದ ಅವರು ಧರ್ಮೇಂದ್ರ ಪ್ರಧಾನ್, ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿ ಬಗ್ಗೆ ಡಿಎಂಕೆ ಪಕ್ಷವು ಅಪ್ರಾಮಾಣಿಕ ಮತ್ತು ಅಸಡ್ಡೆ ಹೊಂದಿದೆ ಎಂದು ಆರೋಪಿಸಿದರು.
ಡಿಎಂಕೆ ಸರಕಾರ ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ, ಭಾಷಾ ಆಧಾರಿತ ವಿಭಜನೆ ಮಾಡುವ ಮೂಲಕ ರಾಜಕೀಯ ಕಿಡಿಗೇಡಿತನ ಮಾಡುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಾಗರಿಕರು ಎಂದು ಅವರು ಟೀಕಿಸಿದರು.
ಪ್ರಧಾನ್ ಅವರು ಡಿಎಂಕೆ ಪಕ್ಷದ ವಿರುದ್ಧ ಮಾಡಿದ ಕಟು ಟೀಕೆ ಕೋಲಾಹಲಕ್ಕೆ ಕಾರಣವಾಯಿತು. ರಾಜ್ಯಸಭೆಯಲ್ಲೂ ತ್ರಿಭಾಷಾ ನೀತಿ ಮತ್ತು ಗಡಿ ರಚನಾ ವಿಷಯಗಳ ವಿಷಯವನ್ನು ಎತ್ತಿದ್ದ ನಂತರ ಡಿಎಂಕೆ ಸಭಾತ್ಯಾಗ ಮಾಡಿತು.