Tuesday, March 28, 2023

Latest Posts

ಬರೋಬ್ಬರಿ 13 ಗಂಟೆ ವಿಳಂಬವಾಯ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬರೋಬ್ಬರಿ 13 ಗಂಟೆ ತಡವಾಗಿ ಹೊರಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾಂತ್ರಿಕ ದೋಷದಿಂದಾಗಿ 13 ಗಂಟೆ ವಿಮಾನ ಹೊರಡುವುದು ವಿಳಂಬವಾಗಿದ್ದು, 170 ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿಯೇ ಕಾದು ಹೈರಾಣಾಗಿದ್ದಾರೆ.

ನಿನ್ನ ಮಧ್ಯಾಹ್ನ ಹೊರಡಬೇಕಿದ್ದ ವಿಮಾನ ಬೆಳಗಿನ ಜಾವ 4 ಗಂಟೆಗೆ ಹೊರಟಿದೆ. ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಎದುರಾಗಿದ್ದು, ಸ್ವಲ್ಪ ಸಮಯ ಕಾಯುವಂತೆ ಸಿಬ್ಬಂದಿ ಸೂಚನೆ ನೀಡಿದ್ದರು. ತಾಂತ್ರಿಕ ದೋಷ ಸರಿಯಾಗುವಲ್ಲಿ ಬೆಳಗಿನ ಜಾವ 4 ಗಂಟೆಯಾಗಿದೆ.

ನಿಲ್ದಾಣದಲ್ಲೇ ಭೋಜನ, ಸ್ನ್ಯಾಕ್ಸ್ ವ್ಯವಸ್ಥೆ ಮಾಡಿದ್ದು, ವಿಶೇಷ ನೆರವು ಬೇಕಾದ ಪ್ರಯಾಣಿಕರಿಗೆ ಏರ್‌ಪೋರ್ಟ್ ಲಾಂಜ್‌ನಲ್ಲಿ ಸೌಲಭ್ಯ ಒದಗಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!