ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯವತಿ ಮೇಲೆ ರೇಗಾಡಿದ ಆಟೋ ಡ್ರೈವರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಕೋಪಗೊಂಡು ಯುವತಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುವತಿಯೊಬ್ಬಳು ತನ್ನ ಗೆಳತಿಯ ಜೊತೆ ಸೇರಿ ಆಟೋ ಸೇವೆಯನ್ನು ಪಡೆಯಲು ಮುಂದಾಗಿದ್ದಾಳೆ. ಇಬ್ಬರು ಪೀಕ್ ಹವರ್ ಇದ್ದ ಕಾರಣ ಇಬ್ಬರು ಒಂದೊಂದು ಓಲಾ ಆಟೋ ಬುಕ್ ಮಾಡಿದ್ದಾರೆ. ಯಾವುದು ಮೊದಲು ಬರುತ್ತದೆಯೋ ಅದನ್ನು ಹತ್ತಿಕೊಂಡು ಹೋದರಾಯ್ತು ಅಂತ ನಿರ್ಧರಿಸಿ. ಮೊದಲ ಬಂದ ಆಟೋ ಏರಿ ಕುಳಿತ ಯುವತಿಯರು ಎರಡನೇ ಆಟೋದ ಸೇವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮತ್ತೊಂದು ಆಟೋ ಡ್ರೈವರ್​, ನಾನು ಸಾಕಷ್ಟು ದೂರದಿಂದ ಬಂದಿದ್ದೇನೆ, ಗ್ಯಾಸ್ ಏನು ನಿಮ್ಮಪ್ಪ ಹಾಕ್ತಾನಾ ಅಂತ ಅರಚಾಡಿದ್ದಾನೆ. ಅದು ಮಾತ್ರವಲ್ಲದೇ ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಕೊನೆಗೆ ಯುವತಿ ಮುಖಕ್ಕೆ ಹೊಡೆದಿದ್ದಾನೆ. ಇದೆಲ್ಲವನ್ನೂ ವಿಡಿಯೋ ಮಾಡಿಕೊಂಡ ಯುವತಿ ಅದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಾಕಿದ್ದಾಳೆ.

ಈ ಎಲ್ಲಾ ವಿಡಿಯೋಗಳನ್ನು ಎಕ್ಸ್ ಖಾತೆಯಲ್ಲಿ ಅಪ್​ಲೋಡ್ ಮಾಡಿರುವ ಯುವತಿ, ಬೆಂಗಳೂರು ಸಿಟಿ ಪೊಲೀಸ್, ಓಲಾ ಹಾಗೂ ಓಲಾ ಸಪೋರ್ಟರ್ಸ್​ ಖಾತೆಗಳನ್ನ ಟ್ಯಾಗ್ ಮಾಡಿದ್ದಾರೆ. ಯುವತಿಯ ಪೋಸ್ಟ್​ಗೆ ಸ್ಪಂದಿಸಿರುವ ಬೆಂಗಳೂರು ಪೊಲೀಸರು ಕೂಡಲೇ ಘಟನೆ ನಡೆದ ಏರಿಯಾ ಮತ್ತು ನಿಮ್ಮ ಮೊಬೈಲ್ ನಂಬರ್​ನ್ನು ಡೈರೆಕ್ಟ್ ಮೆಸೇಜ್ ಮಾಡುವಂತೆ ಸೂಚಿಸಿದ್ದಾರೆ.

https://x.com/nihihiti/status/1831324279662915900?ref_src=twsrc%5Etfw%7Ctwcamp%5Etweetembed%7Ctwterm%5E1831326207625048439%7Ctwgr%5Eaa248ecd7273b3cf4236183d34bc34890035644d%7Ctwcon%5Es2_&ref_url=https%3A%2F%2Fnewsfirstlive.com%2Fharassment-and-physically-assaulted-by-auto-driver-on-lady%2F

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲಿಸಿದ ಪೊಲೀಸರು, ಆಟೋ ಚಾಲಕ ಮುತ್ತುರಾಜ್ ಎಂಬಾತನನ್ನ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಗೂ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷಿತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ ಆಟೋ ಚಾಲಕನೊಬ್ಬ ಯುವತಿಯನ್ನ ಅವಾಚ್ಯವಾಗಿ ನಿಂದಿಸಿರುವುದನ್ನು ಒಪ್ಪುವಂತದಲ್ಲ. ಇಂತಹ ಕೆಲ ಆಟೋ ಚಾಲಕರು ಎಲ್ಲರಿಗೂ ಕೆಟ್ಟ ಹೆಸರು ತರುತ್ತಾರೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!