ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದಾಳಿಯ ವಿಷಯವನ್ನು ಭಾರತ ಉತ್ಪ್ರೇಕ್ಷೆಗೊಳಿಸಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ.
ಹಿಂದುಗಳ ಮೇಲಿನ ಹಿಂಸಾತ್ಮಕ ದಾಳಿ ಕೋಮುವಾದಕ್ಕಿಂತಲೂ ಹೆಚ್ಚು ರಾಜಕೀಯ ಪ್ರೇರಿತವಾಗಿದೆ ಎಂದು ಯೂನಸ್ ಹೇಳಿಕೆ ನೀಡಿದ್ದಾರೆ.
ಈ ವೇಳೆ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆದ ದಾಳಿಯ ಘಟನೆಗಳನ್ನು ಭಾರತ ಬಿಂಬಿಸಿದ ರೀತಿಯನ್ನು ಯೂನಸ್ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಮೇಲಿನ ದಾಳಿಗಳು ರಾಜಕೀಯ ಪತನದ ಒಂದು ಭಾಗವಾಗಿದೆ, ಏಕೆಂದರೆ ಹೆಚ್ಚಿನ ಹಿಂದುಗಳು ಶೇಖ್ ಹಸೀನಾ ನೇತೃತ್ವದ ಈಗ ಪದಚ್ಯುತ ಅವಾಮಿ ಲೀಗ್ ಸರ್ಕಾರವನ್ನು ಬೆಂಬಲಿಸುತ್ತಾರೆ . ಆದ್ದರಿಂದ ಈ ದೌರ್ಜನ್ಯ ಸಂಭವಿಸುತ್ತಿದೆ ಎಂದರು.
ನಾನು ಇದನ್ನು ಮೋದಿಯವರಿಗೂ ಹೇಳಿದ್ದೇನೆ. ಈ ಸಮಸ್ಯೆ ಹಲವಾರು ಆಯಾಮಗಳನ್ನು ಹೊಂದಿದೆ. ಹಸೀನಾ ಮತ್ತು ಅವಾಮಿ ಲೀಗ್‌ನ ದುಷ್ಕ್ರತ್ಯಗಳ ನಂತರ ದೇಶವು ಕ್ರಾಂತಿಯನ್ನು ಎದುರಿಸಿತು. ಈ ವೇಳೆ ಅವರೊಂದಿಗೆ ಇದ್ದವರು ಕೂಡ ದಾಳಿಗಳನ್ನು ಎದುರಿಸಿದರು ಎಂದು ಹೇಳಿದರು.
ಆಗಸ್ಟ್ 5ರ ನಂತರ ಮಾಜಿ ಪ್ರಧಾನಿ ಹಸೀನಾ ಅವರನ್ನು ಪದಚ್ಯುತಿಗೊಳಿಸಲಾಯಿತು. ನಂತರ ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರ ಪ್ರಾರಂಭಗೊಂಡಿದೆ. ದೇವಾಲಯಗಳು ಹಾಗೂ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು.
ಅವಾಮಿ ಲೀಗ್‌ನ ಕಾರ್ಯಕರ್ತರನ್ನು ಹೊಡೆಯುವಾಗ ಬಾಂಗ್ಲಾದಲ್ಲಿ ಹಿಂದುಗಳು ಎಂದರೆ ಅವಾಮಿ ಲೀಗ್‌ನ ಬೆಂಬಲಿಗರು ಎಂಬ ಗ್ರಹಿಕೆಯಿಂದ ಈ ದೌರ್ಜನ್ಯ ನಡೆಯುತ್ತಿದೆ. ನಡೆಯುವುದು ಸರಿ ಎಂದು ನಾನು ಹೇಳುತ್ತಿಲ್ಲ. ಆದರೆ ಅದನ್ನೇ ನೆಪವಾಗಿ ಇಟ್ಟುಕೊಂಡು ಆಸ್ತಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಎರಡು ಲೀಗ್‌ಗಳ ನಡುವೆ ವ್ಯತ್ಯಾಸವೇನಿಲ್ಲ ಎಂದು ತಿಳಿಸಿದರು.
ಇದು ರಾಜಕೀಯವೇ ಹೊರತು ಕೋಮುವಾದವಲ್ಲ. ಭಾರತ ಇದನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ನಾವು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿಲ್ಲ. ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದರು.