ಮಕ್ಕಳಲ್ಲಿ ಸದ್ಗುಣ ಬೆಳೆಸಲು ಭಗವದ್ಗೀತೆ ಸಹಕಾರಿ: ಗುಜರಾತ್ ಮುಸ್ಲಿಂ ಶಿಕ್ಷಕ

ಹೊಸದಿಗಂತ ಡಿಜಿಟಲ್ ಡೆಸ್ಕ್

ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಭಗವದ್ಗೀತೆ ಪಠ್ಯ ಪರಿಚಯಿಸಲು ಅಲ್ಲಿನ ಸರಕಾರ ಮುಂದಾಗಿರುವ ನಡುವೆಯೇ , ಅಲ್ಲಿನ ಮುಸ್ಲಿಂ ಶಿಕ್ಷಕರೊಬ್ಬರು ತಮ್ಮ ಮಕ್ಕಳಿಗೆ ಪಾಠದ ನಡುವೆ ಭಗವಗದ್ಗೀತೆಯನ್ನು ಬೋಧಿಸುವ ಮೂಲಕ ಗಮನ ಸೆಳೆದಿದ್ದಾರೆ.ಮಕ್ಕಳಲ್ಲಿ ಸನ್ನಡತೆ ಮತ್ತು ಸದ್ಗುಣ ಬೆಳೆಸಲು ಭಗವದ್ಗೀತೆ ಸಹಕಾರಿ ಎಂಬುದಾಗಿ ಈ ಶಿಕ್ಷಕ ಅಭಿಪ್ರಾಯ ಪಟ್ಟಿದ್ದಾರೆ.
ಗುಜರಾತ್ ನ ಮ್ಯಾಂಗ್ರೋಲ್ ತಾಲೂಕಿನ ಜಖರ್ದ ಪ್ರಾಥಮಿಕ ಶಾಲೆಯ ಶಿಕ್ಷಕ ಶಾ ಮೊಹಮ್ಮದ್ ಸಯೀದ್ ಎಂಬುವವರು ಕಳೆದ 12 ವರ್ಷಗಳಿಂದ ಮಕ್ಕಳಿಗೆ ಭಗವದ್ಗೀತೆ ಬೋಧಿಸುತ್ತಾ ಬರುತ್ತಿದ್ದಾರೆ.ಸಯೀದ್ ಅವರು ಯಾವುದೇ ಧಾರ್ಮಿಕ ತಾರತಮ್ಯ ಇಲ್ಲದೆ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು 2012ರಿಂದಲೇ ಭಗವದ್ಗೀತೆಯನ್ನು ಬೋಧಿಸುತ್ತಾ ಬಂದಿದ್ದಾರೆ .
2012ರಿಂದಲೇ ನಾವು ನಮ್ಮ ಶಾಲೆಯ ಮಕ್ಕಳಿಗೆ ಭಗವದ್ಗೀತೆಯನ್ನು ಹೇಳಿಕೊಡುತ್ತಿಕಲಿಸುತ್ತಿದ್ದೇವೆ .
ನಮ್ಮ ಪಾಠದ ಕ್ರಮ ಹೀಗಿದೆ :ಮಕ್ಕಳು ಪ್ರತಿದಿನ ಮನೆಯಲ್ಲಿ ಗೀತೆಯ ಒಂದು ಪುಟವನ್ನು ಓದಿ ಮರುದಿನ ಶಾಲೆಗೆ ಬಂದು ಅದರ ಅರ್ಥವನ್ನು ಸಹಪಾಠಿಗಳಿಗೆ ವಿವರಿಸಬೇಕು. ಪ್ರತಿ ಭಾನುವಾರ ಗ್ರಾಮದ ಒಬ್ಬರ ಮನೆಗೆ ಮಕ್ಕಳೆಲ್ಲರನ್ನೂ ಬರಲು ಹೇಳುತ್ತೇವೆ. ಅವರ ಮನೆಯ ಹೊರಗೆ ನಾನು ಮತ್ತು ಮಕ್ಕಳು ಭಗವದ್ಗೀತೆಯನ್ನು ಪಠಿಸುತ್ತೇವೆ. ಈ ಸಂದರ್ಭ ಶ್ಲೋಕಗಳನ್ನು ಆಲಿಸಲು ಜನರು ಕೂಡಾ ಬರುತ್ತಾರೆ. ಇಂದು ಇಡಿ ಗ್ರಾಮದಲ್ಲಿ ಎಲ್ಲರೂ ಭಗವದ್ಗೀತೆ ಫಠನ ಮಾಡುತ್ತಾರೆ.ಈ ರೀತಿ ನಾವು ನಮ್ಮ ಹಳ್ಳಿಯಲ್ಲಿ ಭಗವದ್ಗೀತೆಯನ್ನು ಜನಪ್ರಿಯಗೊಳಿಸುತ್ತಿದ್ದೇವೆ ಎನ್ನುತ್ತಾರೆ ಮೊಹಮ್ಮದ್ ಸಯೀದ್.
ತಾನು ಈ ಗ್ರಾಮಕ್ಕೆ ಬಂದಾಗ ಯಾರ ಬಳಿಯಲ್ಲೂ ಭಗವದ್ಗೀತೆಯ ಪುಸ್ತಕವಿರಲಿಲ್ಲ. ನಾನೇ ಹಲವರಿಗೆ ಖರೀದಿಸಿ ಕೊಟ್ಟಿದ್ದೇನೆ.ನಮ್ಮ ಶಾಲೆಯಲ್ಲಿ 1ರಿಂದ ೫ನೇ ತರಗತಿವರೆಗೆ ಭಗವದ್ಗೀತೆ ಕಲಿಸುತ್ತಿದ್ದೇವೆ. ಶಾಲೆಯ ಹಿಂದು ಮತ್ತು ಮುಸ್ಲಿಂ ಸೇರಿ ಎಲ್ಲ 72ಮಂದಿ ಮಕ್ಕಳು ಭಗವದ್ಗೀತೆ ಪಠಣ ಮಾಡುತ್ತಾರೆ.ಮಕ್ಕಳಲ್ಲಿ ಉತ್ತಮ ಗುಣ ನಡತೆಯ ಸಂಸ್ಕಾರ ಲಭಿಸುವಂತಾಗಲು ಭಗವದ್ಗೀತೆ ಕಲಿಕೆ ಸಹಾಯ ಮಾಡುತ್ತದೆ ಎಂದು ಮೊಹಮ್ಮದ್ ಸಯೀದ್ ಅನುಭವದಿಂದ ಹೇಳುತ್ತಾರೆ.
ಸಯೀದ್ ಅವರ ಅಭಿಪ್ರಾಯಕ್ಕೆ ದನಿಗೂಡಿಸುವ ಗ್ರಾಮದ ಸರಪಂಚ್ ಜಗದೀಶ್ ವಾಸವ ಅವರು, ಭಗವದ್ಗೀತೆ ಕಲಿತ ಮಕ್ಕಳಲ್ಲಿ ಬದಲಾವಣೆ ಎದ್ದು ಕಾಣುತ್ತದೆ ಎನ್ನುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!