ವೇದಿಕೆ ಮೇಲೆ ಹಾಡುತ್ತಿದ್ದ ಭೋಜ್​ಪುರಿ ಗಾಯಕಿಗೆ ಗುಂಡೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾರ್ಯಕ್ರಮ ನಡೆಯುತ್ತಿರುವ ವೇಳೆ ವೇದಿಕೆ ಮೇಲೆ ಹಾಡುಹಗಲೇ ಭೋಜ್​ಪುರಿ ಗಾಯಕಿಯ ಮೇಲೆ ಗುಂಡು ಹಾರಿಸಲಾಗಿದ್ದು ಗಾಯಗೊಂಡಿರುವ ಗಾಯಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಟ್ನಾದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಗಾಯಕಿ ನಿಶಾ ಉಪಾಧ್ಯಾಯ (Nisha Upadhyay) ಸಂಗೀತ ಕಾರ್ಯಕ್ರಮ ನೀಡುತ್ತಿರುವ ವೇಳೆ ಅಗಂತುಕನೊಬ್ಬ ಗುಂಡು ಹಾರಿಸಿದ್ದು, ನಟಿಯ ಎಡಗಾಲಿಗೆ ಗುಂಡು ತಗುಲಿದೆ.

ನಟಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.ಎಡಗಾಲಿನ ತೊಡೆಯ ಭಾಗಕ್ಕೆ ಸಣ್ಣ ಗಾಯವಷ್ಟೆ ಆಗಿದೆ. ನಟಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ.

ಯಾರು ಯಾಕಾಗಿ ನಟಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಘಟನೆ ಬಗ್ಗೆ ಲಿಖಿತ ದೂರು ದಾಖಲಾಗಿಲ್ಲ ಹಾಗಿದ್ದರೂ ಲಭ್ಯ ಮಾಹಿತಿ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

https://twitter.com/jantatalkies_/status/1663975754768748544?ref_src=twsrc%5Etfw%7Ctwcamp%5Etweetembed%7Ctwterm%5E1663975754768748544%7Ctwgr%5Eca652593d7a55ce970dc92ddde1520e9b27242dd%7Ctwcon%5Es1_&ref_url=https%3A%2F%2Ftv9kannada.com%2Fentertainment%2Fbhojpuri-singer-nisha-upadhyay-suffered-bullet-injury-in-patna-mcr-592037.html

ಗಾಯಕಿ ನಿಶಾ ಉಪಾಧ್ಯಾಯ, ಬಿಹಾರದ ಸರಾನಾ ಜಿಲ್ಲೆಯ ಗೌರ್ ಬಸಂತ್ ಗ್ರಾಮದವರಾಗಿದ್ದಾರೆ. ಬಿಹಾರದ ಜನಪ್ರಿಯ ಭೋಜ್​ಪುರಿ ಗಾಯಕರಲ್ಲಿ ನಿಶಾ ಸಹ ಒಬ್ಬರಾಗಿದ್ದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ, ಹೋಳಿ ಇನ್ನಿತರೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!