ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನಲ್ಲಿ ಸತತ ಎರಡು ಸೋಲುಗಳನ್ನು ಎದುರಿಸಿದೆ. ಈ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ಹೊಸ ದಾಖಲೆ ಬರೆದಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ತವರಿನಲ್ಲಿ ಮೊದಲ ಪಂದ್ಯವನ್ನಾಡಿದ್ದ ಆರ್‌ಸಿಬಿ ಹೀನಾಯವಾಗಿ ಸೋಲು ಕಂಡಿತ್ತು. ಇದೀಗ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೊತ್ತಿದೆ. ಇದರೊಂದಿಗೆ ಆರ್‌ಸಿಬಿ ತನ್ನ ಖಾತೆಗೆ ಮತ್ತೊಂದು ಬೇಡವಾದ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ, ಒಂದೇ ಮೈದಾನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ಬಿರುದು ಆರ್‌ಸಿಬಿ ಪಾಲಾಗಿದೆ.
ಇದರೊಂದಿಗೆ ಬೆಂಗಳೂರು ತಂಡ ತವರಿನಲ್ಲಿ 45ನೇ ಬಾರಿ ಸೋಲನ್ನು ಅನುಭವಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಂದೇ ಕ್ರೀಡಾಂಗಣದಲ್ಲಿ ಯಾವುದೇ ತಂಡ ಅನುಭವಿಸಿದ ಅತಿ ಹೆಚ್ಚು ಸೋಲುಗಳಾಗಿದೆ.