ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ಗಾಗಿ ಮಗಳ ಜೊತೆ ಕಾಯುತ್ತಾ ನಿಂತಿದ್ದ ತಂದೆಗೆ ಬರಸಿಡಿಲು ಬಡಿದಂತಾಗಿದೆ, ಕ್ಷಣದ ಹಿಂದೆ ಕೈ ಹಿಡಿದು ನಿಂತಿದ್ದ ಮಗಳಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ.
ಬೈಕ್ ಡಿಕ್ಕಿ ಹೊಡೆದು 70ಮೀಟರ್ ಎಳೆದೊಯ್ದ ಹೃದಯ ವಿದ್ರಾವಕ ಘಟನೆ ವಾರಣಾಸಿಯಲ್ಲಿ ನಡೆದಿದೆ.
ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಕರಣ್ ಗುಪ್ತಾ ಚೌಬೆಪುರದ ರಸ್ತೆಯಲ್ಲಿ ತಮ್ಮ ಮಗಳು ಕಾವ್ಯ ಜತೆ ಪಾಂಡೆಪುರಕ್ಕೆ ಹೊಗಲು ಬಸ್ಗಾಗಿ ಕಾಯುತ್ತಿದ್ದರು, ಮಗಳು ರಸ್ತೆ ಬದಿಯಿಂದ ಸ್ವಲ್ಪ ಮಂದೆ ಬಂದಾಗ ಎದುರಿನಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದು ಎಳೆದೊಯ್ದಿದ್ದಾನೆ.
ಬೈಕ್ ಬಲವಾಗಿ ಹೊಡೆದ ರಭಸಕ್ಕೆ ಕಾವ್ಯ ಕೆಳಗೆ ಬಿದ್ದಿದ್ದಾಳೆ. ಸವಾರನ ಬೇಜವಾಬ್ದಾರಿಯಿಂದ ಸ್ವಲ್ಪ ದೂರ ಎಳೆದೊಯ್ದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿ ಇದೀಗ ಎಲ್ಲೆಡೆ ಈ ಸುದ್ದಿ ವೈರಲ್ ಆಗಿದೆ.