ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಗೂ ಮುನ್ನ ಮಕ್ಕಳು, ಮಕ್ಕಳಾದ ನಂತರ ಮದುವೆ ಇದೆರಡೂ ಬಾಲಿವುಡ್‌ನಲ್ಲಿ ಕಾಮನ್ ಆಗಿದೆ. ಈ ಲಿಸ್ಟ್‌ನಲ್ಲಿ ನಟಿ ನೇಹಾ ಧೂಪಿಯಾ ಕೂಡ ಸೇರಿದ್ದಾರೆ. ಪ್ರೆಗ್ನೆಂಟ್ ಎಂದು ಗೊತ್ತಾದ ನಂತರ ಮೂರೇ ದಿನದಲ್ಲಿ ನೇಹಾ ತಮ್ಮ ಬಾಯ್‌ಫ್ರೆಂಡ್ ಅಂಗದ್ ಜೊತೆ ಮದುವೆಯಾಗಿದ್ದಾರೆ.
2018ರ ಮೇ 10ರಂದು ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಗುರುದ್ವಾರದಲ್ಲಿ ವಿವಾಹವಾದರು. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಕಾರಣ ನೇಹಾ ಅವರ ಮದುವೆಯನ್ನು ತರಾತುರಿಯಲ್ಲಿ ಮುಗಿಸಲಾಗಿತ್ತು. ತಾವು ಗರ್ಭಿಣಿ ಎಂದು ಮನೆಯವರಿಗೆ ಹೇಳಿದಾಗ ಮನೆಯವರು ಒಂದು ಕಂಡೀಷನ್ ಹಾಕಿದ್ದರು ಎಂದು ನೇಹಾ ಹೇಳಿದ್ದರು. ‘ನಾನು ಅಂಗದ್ ಮತ್ತು ನನ್ನ ಸಂಬಂಧದ ಬಗ್ಗೆ ನನ್ನ ಪೋಷಕರಿಗೆ ಹೇಳಿದಾಗ, ಅವರು ಆಘಾತಕ್ಕೊಳಗಾದರು. ಆ ನಂತರ ನಾನು ಗರ್ಭಿಣಿ ಎಂದು ಹೇಳಿದ್ದೆ. ಆಗ ಅವರು ನನಗೆ ಎರಡು ದಿನ ಸಮಯ ನೀಡಿ ಮದುವೆಯಾಗಲು ಹೇಳಿದರು. ನನಗೆ ಅಂಗದ್ ನಾಲ್ಕು ವರ್ಷಗಳಿಂದ ಗೊತ್ತಿತ್ತು. ಹಾಗಾಗಿ ಇಷ್ಟು ಬೇಗ ಮದುವೆಯಾಗಲು ನಿರ್ಧರಿಸುವುದು ನನಗೆ ಕಷ್ಟವಾಗಲಿಲ್ಲ’ ಎಂದಿದ್ದಾರೆ.
ಮದುವೆ ಆದ ಐದು ತಿಂಗಳ ನಂತರ ಅವರು ನವೆಂಬರ್ 2018ರಲ್ಲಿ ಮಗಳಿಗೆ ಜನ್ಮ ನೀಡಿದರು. ನೇಹಾ ಮತ್ತು ಅಂಗದ್ ತಮ್ಮ ಮಗಳಿಗೆ ಮೆಹರ್ ಎಂದು ಹೆಸರಿಟ್ಟರು. ನಂತರ ಅಕ್ಟೋಬರ್ 3, 2021 ರಂದು ನೇಹಾ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದರು. ಅವರ ಹೆಸರು ಗುರಿಕ್ ಸಿಂಗ್ ಬೇಡಿ.