ಹೊಸದಿಗಂತ ವರದಿ ವಿಜಯಪುರ:
ಈಜಲು ಹೋದ ಬಾಲಕನೊಬ್ಬ ಬಾವಿಯ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಕೆಸಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತ ಬಾಲಕನನ್ನು ಮಹಾರಾಷ್ಟ್ರದ ಪುಣೆ ನಿವಾಸಿ ರಘು ಲಕ್ಷ್ಮಣ ಧೋತ್ರೆ (16) ಎಂದು ಗುರುತಿಸಲಾಗಿದೆ.
ಬೇಸಿಗೆ ರಜೆಯ ಹಿನ್ನೆಲೆ ತಾಯಿಯ ತವರೂರು ಕೆಸಾಪುರಕ್ಕೆ ಬಂದಿದ್ದ ಬಾಲಕ ಊರಿನ ಗೆಳೆಯರೊಂದಿಗೆ ಈಜಲು ಹೋಗಿದ್ದ, ತನಗೆ ಸರಿಯಾಗಿ ಈಜು ಬರದಿದ್ದರೂ ಈಜು ಬರುತ್ತದೆ ಎಂದು ಆಳವಾದ ಬಾವಿಯಲ್ಲಿ ಜಿಗಿದವನು ಶವವಾಗಿಯೇ ಮೇಲೆದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಬಾಲಕರು ತಿಳಿಸಿದ್ದಾರೆ.
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.