ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ್ದು, ತೀವ್ರ ಎದೆನೋವಿನಿಂದ ಬಾಲಕ ಮೃತಪಟ್ಟಿದ್ದಾನೆ.
ಬಾಲಸೋರ್‌ನ ಬನ್ಸಿಧರ್ ವಿದ್ಯಾಪೀಠದ 10ನೇ ತರಗತಿ ವಿದ್ಯಾರ್ಥಿ ಸುಮಂತ್ ದಾಸ್‌ಗೆ ಶಿಕ್ಷಕರು ಮನಸೋ ಇಚ್ಛೆ ಥಳಿಸಿದ್ದಾರೆ.
ಅದೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಶಿಕ್ಷಕರ ಬಳಿ ಸುಮಂತ್ ವಿರುದ್ಧ ದೂರು ಹೇಳಿದ್ದಾರೆ. ಸುಮಂತ್ ನನ್ನ ಅನುಮತಿ ಇಲ್ಲದೆ ನನ್ನ ಸೈಕಲ್ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿದ್ದು, ಶಿಕ್ಷಕ ಸುಮಂತ್‌ಗೆ ಥಳಿಸಿದ್ದಾರೆ.
ಮನೆಗೆ ಬಂದ ಸುಮಂತ್ ಎದೆನೋವಿನಿಂದ ಬಳಲಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸುಮಂತ್ ಮೃತಪಟ್ಟಿದ್ದಾರೆ.
ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದೆ.