Tuesday, March 21, 2023

Latest Posts

ಕೊಳವೆಬಾವಿಗೆ ಬಿದ್ದ ಬಾಲಕ, ಸತತ 9 ಗಂಟೆ ಕಾರ್ಯಾಚರಣೆ ನಡೆಸಿದರೂ ಆತ ಬದುಕುಳಿಯಲಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಐದು ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕರ್ಜತ್ ತಹಸಿಲ್ ವ್ಯಾಪ್ತಿಯ ಕೊಪರ್ಡಿ ಗ್ರಾಮದಲ್ಲಿರುವ ಕೊಳವೆಬಾವಿಗೆ ಮಗು ಬಿದ್ದಿದ್ದು, ಒಟ್ಟು ನಾಲ್ಕು ತಂಡಗಳು ಸತತ ಒಂಬತ್ತು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಮಗುವನ್ನು ಹೊರತೆಗೆದಿದ್ದಾರೆ. ಆದರೆ ಮಗು ಬದುಕುಳಿದಿರಲಿಲ್ಲ. 15 ಅಡಿ ಆಳದಲ್ಲಿ ಸಿಕ್ಕಿದ್ದ ಮಗು ಆಟವಾಡುತ್ತಾ ಬಾವಿಗೆ ಬಿದ್ದಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

ಬೋರ್‌ವೆಲ್‌ಗಾಗಿ ಹೊಂಡ ತೋಡಲಾಗಿತ್ತು. ಆದರೆ ಅದನ್ನು ಮುಚ್ಚಿರಲಿಲ್ಲ, ಸಿಬ್ಬಂದಿ ಮಗುವಿನ ಜೊತೆ ಮಾತನಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಆದರೆ ಮಗು ಉತ್ತರ ನೀಡುತ್ತಿರಲಿಲ್ಲ. ಬೋರ್‌ವೆಲ್‌ನಿಂದ ಮಗು ಹೊರಗೆ ತೆಗೆದ ತಕ್ಷಣವೇ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಆದರೆ ಅಷ್ಟರೊಳಗೆ ಕಂದಮ್ಮ ಮೃತಪಟ್ಟಿತ್ತು. ಬೋರ್‌ವೆಲ್ ದುರಂತಗಳು ಸಂಭವಿಸುತ್ತಲೇ ಇದ್ದು, ಪೋಷಕರು ಈ ಬಗ್ಗೆ ಜಾಗೃತರಾಗಿರಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!