ದಿಗಂತ ವರದಿ ವಿಜಯಪುರ:
ನಗರದ ಶಿಕಾರಖಾನೆ ಬಡಾವಣೆಯ ಉಪಾಧ್ಯೆ ಕ್ವಾಟರ್ಸ್ ನ ಮನೆಯಲ್ಲಿ ಬಾಲಕನೊಬ್ಬನ ಶವ ಗುರುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತಪಟ್ಟ ಬಾಲಕನನ್ನು ಜೀವನ್ (14) ಎಂದು ಗುರುತಿಸಲಾಗಿದೆ. ಮೃತಪಟ್ಟ ಬಾಲಕನ ಸಾವು ಆತ್ಮಹತ್ಯೆಯೋ ?, ಕೊಲೆಯೋ ? ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.