ಇಂದು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹುಟ್ಟುಹಬ್ಬ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್ ತಂಡ ಕಂಡತಹ ಅತ್ಯಂತ ಹೆಮ್ಮೆಯ ಕ್ರಿಕೆಟಿಗ, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಇಂದು ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಪಾಲಿಗೆ ಆಪತ್ಭಾಂದವ ಆಗಿದ್ದವರು.

ವಿಶ್ವದ ಎಂತಹ ಕಠಿಣ ಪಿಚ್ ಆದರೂ ಅಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹೀಗೆ ವಿಶ್ವ ದಿಗ್ಗಜರೇ ವೈಫಲಗೊಂಡರೂ ಅಂತಹ ಪಿಚ್‌ಗಳಲ್ಲಿ ನೆಲೆಯೂರಿ ನಿಲ್ಲುವ ಮೂಲಕ ದ್ರಾವಿಡ್, ಟೀಮ್ ಇಂಡಿಯಾ ಪಾಲಿಗೆ ಆಪತ್ಬಾಂಧವ ಎನಿಸಿದ್ದರು. ಇದೇ ಕಾರಣಕ್ಕಾಗಿ ‘ದಿ ವಾಲ್’ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ.

1996 ಏಪ್ರಿಲ್ 3 ರಂದು ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ರಾಹುಲ್ ದ್ರಾವಿಡ್ ಪದಾರ್ಪಣೆ ಮಾಡಿದ್ದರು. 164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್ ಗಳಿಸಿರುವ ದ್ರಾವಿಡ್ 36 ಶತಕ ಹಾಗೂ 63 ಅರ್ಧಶತಕ ಬಾರಿಸಿದ್ದಾರೆ. ದ್ರಾವಿಡ್ ಅವರು ಬರೋಬ್ಬರಿ 31,258 ಬಾಲ್​ಗಳನ್ನು ಎದುರಿಸಿ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!