ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ ಮುಕ್ತಾಯಗೊಂಡಿದ್ದು, ಮುಂದಿನ ಅಧ್ಯಕ್ಷತೆಯನ್ನು ಜವಾಬ್ದಾರಿಯನ್ನು ಬ್ರೆಜಿಲ್ ವಹಿಸಿಕೊಂಡಿದೆ. ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡ ಬಳಿಕ ಮಾತನಾಡಿದ ಬ್ರೆಜಿಲ್ ಅಧ್ಯಕ್ಷ ಮೂರು ಅಂಶಗಳನ್ನ ಈ ಸಂದರ್ಭದಲ್ಲಿ ಪ್ರಸ್ತುಪಡಿಸಿದರು.
ಬ್ರೆಜಿಲ್ನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಮಾತನಾಡಿ..”G-20ರ ಬ್ರೆಜಿಲಿಯನ್ ಅಧ್ಯಕ್ಷತೆಯು ಮೂರು ಆದ್ಯತೆಗಳನ್ನು ಹೊಂದಿದೆ ಎಂದರು.
- ಮೊದಲನೆಯದಾಗಿ, ಸಾಮಾಜಿಕ ಸೇರ್ಪಡೆ ಮತ್ತು ಹಸಿವಿನ ವಿರುದ್ಧದ ಹೋರಾಟ.
- ಎರಡನೆಯದು, ಶಕ್ತಿ ಪರಿವರ್ತನೆ ಮತ್ತು ಮೂರು ಅಂಶಗಳಲ್ಲಿ ಸುಸ್ಥಿರ ಅಭಿವೃದ್ಧಿ.
- ಮೂರನೆಯದು, ಆಡಳಿತ ಸಂಸ್ಥೆಗಳಿಂದ ಜಾಗತಿಕ ಸುಧಾರಣೆ ಈ ಎಲ್ಲಾ ಆದ್ಯತೆಗಳು ಬ್ರೆಜಿಲಿಯನ್ ಪ್ರೆಸಿಡೆನ್ಸಿ ಧ್ಯೇಯವಾಕ್ಯದ ಭಾಗವಾಗಿದೆ ಎಂದರು.
ಹಸಿವು ಮತ್ತು ಬಡತನದ ವಿರುದ್ಧ ಜಾಗತಿಕ ಒಕ್ಕೂಟ ಮತ್ತು ಹವಾಮಾನ ಬದಲಾವಣೆ ವಿರುದ್ಧ ಜಾಗತಿಕ ಸಜ್ಜುಗೊಳಿಸುವಿಕೆಗಾಗಿ ಎರಡು ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.