ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆಯುತ್ತಿರುವ ಜಿ-20ಶೃಂಗಸಭೆ ಇಂದಿಗೆ ಮುಕ್ತಾಯವಾಗಲಿದ್ದು, ಮುಂದಿನ ವರ್ಷದ ಶೃಂಗಸಭೆ ಬ್ರೆಜಿಲ್‌ನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾಗೆ ಅವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
#WATCH | G 20 in India | Prime Minister Narendra Modi hands over the gavel of G 20 presidency to the President of Brazil Luiz Inácio Lula da Silva. pic.twitter.com/ihEmXN9lty
— ANI (@ANI) September 10, 2023
ಜವಾಬ್ದಾರಿ ಹಸ್ತಾಂತರ ಬಳಿಕ ಮಾತನಾಡಿದ ಪ್ರಧಾನಿ..ನಿಮಗೆಲ್ಲ ತಿಳಿದಿರುವಂತೆ ಭಾರತವು ನವೆಂಬರ್ 2023ರವರೆಗೆ G20 ಅಧ್ಯಕ್ಷತೆಯ ಜವಾಬ್ದಾರಿಯನ್ನು ಹೊಂದಿದೆ. ಈ ಎರಡು ದಿನಗಳಲ್ಲಿ, ನೀವೆಲ್ಲರೂ ಸಾಕಷ್ಟು ಸಲಹೆಗಳನ್ನು ನೀಡಿದ್ದೀರಿ ಮತ್ತು ಪ್ರಸ್ತಾಪಗಳನ್ನು ಸಭೆಯ ಮುಂದಿರಿಸಿದ್ದೀರಿ. ಪ್ರಗತಿಯನ್ನು ಹೇಗೆ ವೇಗಗೊಳಿಸಬಹುದು ಎಂಬುದನ್ನು ಮತ್ತೊಮ್ಮೆ ಪರಿಶೀಲಿಸೋಣ ಎಂದರು.
ʻನಾನು ನವೆಂಬರ್ ಅಂತ್ಯದಲ್ಲಿ ಜಿ 20ರ ವರ್ಚುವಲ್ ಸೆಷನ್ ಅನ್ನು ನಡೆಸುವುದಾಗಿ ಪ್ರಧಾನಿ ಪ್ರಸ್ತಾಪಿಸಿದರು. ಈ ಶೃಂಗಸಭೆಯಲ್ಲಿ ನಿರ್ಧರಿಸಿದ ವಿಷಯಗಳನ್ನು ಆ ವರ್ಚುವಲ್ ಅಧಿವೇಶನದಲ್ಲಿ ನಾವು ಪರಿಶೀಲಿಸಬಹುದು. ನೀವೆಲ್ಲರೂ ವರ್ಚುವಲ್ ಸೆಷನ್‌ನಲ್ಲಿ ಭಾಗಿಯಾಗುತ್ತೀರಿ ಎಂಬ ನಂಬಿಕೆ ನನಗಿದೆ. ಇದರೊಂದಿಗೆ, ನಾನು G-20 ಶೃಂಗಸಭೆಯನ್ನು ಮುಕ್ತಾಯಗೊಳಿಸುತ್ತಿರುವುದಾಗಿʼ ಪ್ರಧಾನಿ ಮೋದಿ ಘೋಷಿಸಿದರು.