Thursday, June 1, 2023

Latest Posts

SHOCKING | ಮದುವೆ ಮನೆಯಲ್ಲೇ ವಿಷ ಸೇವಿಸಿದ ವಧು-ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಮನೆಯಲ್ಲಿ ಸಂಭ್ರಮ ತುಂಬಿ ತುಳುಕಬೇಕಿತ್ತು, ಆದರೆ ಇಲ್ಲಿ ಸೂತಕದ ಛಾಯೆ ಕಾಣಿಸುತ್ತಿದೆ..
ಹೌದು, ಮಧ್ಯಪ್ರದೇಶದ ಇಂದೋರ್‌ನಲ್ಲಿ ಮದುವೆ ಮನೆಯಲ್ಲಿಯೇ ವಧು-ವರ ಇಬ್ಬರೂ ವಿಷ ಕುಡಿದಿದ್ದಾರೆ. ವರ ಮೃತಪಟ್ಟಿದ್ದು, ವಧುವಿನ ಸ್ಥಿತಿ ಚಿಂತಾಜನಕವಾಗಿದೆ.

ಮದುವೆ ಮನೆಯಲ್ಲಿ ಕೆಲ ವಿಷಯಗಳಿಗೆ ವಾಗ್ವಾದ ನಡೆದಿದ್ದು, ವರ ವಿಷ ಕುಡಿದು ವಧುವಿನ ಬಳಿ ಬಂದು ಹೇಳಿದ್ದಾನೆ. ಆಗ ಆಕೆಯೂ ವಿಷ ಕುಡಿದಿದ್ದಾಳೆ. ಮದುವೆ ಮನೆಯಲ್ಲಿ ಜಗಳವಾಗಿದ್ದೇ ಸಾವಿಗೆ ಕಾರಣ ಎನ್ನಲಾಗಿದೆ.

ಇದು ಪ್ರೇಮವಿವಾಹವಾಗಿದ್ದು, ಆಕೆಯೇ ಮದುವೆ ಆಗಬೇಕು ಎಂದು ಪೀಡಿಸುತ್ತಿದ್ದಳು. ವರನಿಗೆ ಇನ್ನೂ ೨೧ ವರ್ಷ ಆಗಿದ್ದು, ಆತ ಸೆಟಲ್ ಆಗಲು ಸಮಯ ಕೋರಿದ್ದ. ಆದರೆ ಇದಕ್ಕೆ ಅವಳು ಒಪ್ಪದೇ ರಂಪ ಮಾಡಿದ್ದಳು ಎನ್ನಲಾಗಿದೆ. ಮದುವೆ ಮನೆಯಲ್ಲಿ ಜಗಳ ತಾರಕಕ್ಕೇರಿದ್ದು, ಮನನೊಂದು ವರ ವಿಷ ಸೇವಿಸಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!