ಅಗಲಿದ ಮಾಲೀಕನಿಗೆ ಎತ್ತಿನ ಕಣ್ಣೀರ ವಿದಾಯ: ಅಂತ್ಯಕ್ರಿಯೆವರೆಗೂ ಸ್ಮಶಾನ ಬಿಟ್ಟು ಹೋಗದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಒಂದು ಎತ್ತು ಅಗಲಿದ ತನ್ನ ಮಾಲೀಕನಿಗೆ ಕಣ್ಣೀರ ವಿದಾಯ ನೀಡಿದೆ. ಮಾಲೀಕ ತನ್ನ ನಡುವಿನ ಅವಿನಾಭಾವ ಸಂಬಂಧವನ್ನು ತೋರಿಸಿದೆ. ಸ್ಮಶಾನಕ್ಕೆ ಓಡಿ ಬಂದು ತನ್ನ ಯಜಮಾನನ ಮೃತದೇಹದ ಬಳಿ ಅಳುತ್ತಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ. ಅಂತ್ಯಕ್ರಿಯೆ ಮುಗಿಯುವವರೆಗೂ ಅಲ್ಲೇ ಇದ್ದು ಅಂತಿಮ ವಿದಾಯ ಹೇಳಿದೆ.

ಹಜಾರಿಬಾಗ್ ಪ್ರದೇಶದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧತೆ ನಡೆಸಿದ್ದಾರೆ. ಅಷ್ಟರಲ್ಲಿ ಎತ್ತೊಂದು ಸ್ಮಶಾನದ ಬಳಿ  ಓಡಿ ಬಂದು ಮಾಲೀಕನ ಮೃತದೇಹಕ್ಕೆ ಮುತ್ತಿಟ್ಟು ಕಣ್ಣೀರು ಸುರಿಸಿದೆ. ಇದನ್ನು ನೋಡಿ ಮೃತನ ಸಂಬಂಧಿಕರು ಮತ್ತು ಸ್ನೇಹಿತರು ಆಶ್ಚರ್ಯಚಕಿತರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!