Wednesday, October 5, 2022

Latest Posts

ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿತು ‘ಹರ್ ಘರ್ ತಿರಂಗಾ’ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ‘ಹರ್ ಘರ್ ತಿರಂಗಾ’ ಕರೆ ದೇಶದಲ್ಲಿ ೧೦ ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದೆ.

ದೇಶದಲ್ಲಿ ಬರೋಬ್ಬರಿ 30 ಕೋಟಿಗೂ ಅಧಿಕ ಧ್ವಜಗಳ ಮಾರಾಟ ನಡೆದು 500 ಕೋಟಿ ರೂ.ಗಳ ವ್ಯವಹಾರವಾಗಿದೆ.
ಸಾಮಾನ್ಯವಾಗಿ ಪ್ರತೀ ವರ್ಷ ತ್ರಿವರ್ಣ ಧ್ವಜ ಮಾರಾಟ ವ್ಯವಹಾರ ಸುಮಾರು 150-200 ಕೋಟಿ ರೂ. ಗಳಿಗೆ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಅದು 500 ಕೋಟಿ ರೂ.ಗೆ ಮುಟ್ಟಿದೆ ಎಂದಿದೆ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ.

‘ಹರ್ ಘರ್ ತಿರಂಗಾ’ ಅಭಿಯಾನ ಜು.22ರಂದು ಆರಂಭಗೊಂಡಿದ್ದು, ಆ.13ರಿಂದ 15ರವರೆಗೆ ಜನತೆ ತಮ್ಮ ಮನೆ, ಕಚೇರಿ, ವ್ಯವಹಾರ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ‘ಆಜಾದಿ ಕಾ ಅಮೃತ ಮಹೋತ್ಸವ’ವನ್ನು ವಿಶೇಷವಾಗಿ ಆಚರಿಸುವಂತೆ ಕರೆ ನೀಡಲಾಗಿತ್ತು. ಇದರಿಂದ ಸ್ಥಳೀಯ ದರ್ಜಿಗಳಿಗೆ, ಸ್ತ್ರೀಶಕ್ತಿ ಸಂಘಟನೆಗಳು, ಗ್ರಾಮೀಣ ಸಂಘಸಂಸ್ಥೆಗಳು, ಸಾಮಾನ್ಯ ಮಹಿಳೆ ಯರಿಗೆ ಕೆಲಸ ಲಭಿಸಿ ವಿಶೇಷ ಆರ್ಥಿಕ ಬಲ ಸಿಗುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!