ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಫರಿದಾಬಾದ್ನಲ್ಲಿ ವಾಹನ ತಪಾಸಣೆ ವೇಳೆ ಕಾರು ಚಾಲಕ ಟ್ರಾಫಿಕ್ ಪೊಲೀಸರನ್ನು ಎಳೆದೊಯ್ದ ಘಟನೆ ನಡೆದಿದೆ.
ಪೊಲೀಸರು ಚಾಲಕನ ಬಳಿ ದಾಖಲೆ ಕೇಳಿದ್ದು, ಸರಿಯಾದ ದಾಖಲೆ ಹಾಗೂ ಕುಡಿದು ಕಾರು ಓಡಿಸುತ್ತಿದ್ದ ಕಾರಣ ಟ್ರಾಫಿಕ್ ಪೊಲೀಸರಿಗೆ ಉತ್ತರ ಹೇಳಲಾಗದೇ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಲ್ಲಭಗಢ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಚಾಲಕನೊಬ್ಬ ಕುಡಿದ ಅಮಲಿನಲ್ಲಿ ತನ್ನ ಕಾರಿನಲ್ಲಿ ಒಂದಿಷ್ಟು ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪೊಲೀಸರಿಗೆ ವಾಹನ ತಪಾಸಣೆ ವೇಳೆ ಈ ವಿಚಾರ ತಿಳಿದು ಬಂದಿದೆ. ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಚಾಲಕನ ಬಳಿಗೆ ಬಂದು ವಾಹನದ ದಾಖಲೆಗಳನ್ನು ಕೇಳಿದ್ದಾರೆ, ದಾಖಲೆಗಳು ಇಲ್ಲದ ಕಾರಣ ಆತನಿಗೆ ದಂಡ ವಿಧಿಸಿದ್ದಾರೆ. ನಂತರ ಇಬ್ಬರ ನಡುವೆ ವಾದ ನಡೆದಿದೆ.
ನಂತರ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಅವನನ್ನು ಪರಿಶೀಲನೆ ಮಾಡಲು ಕಾರಿನ ಡೋರ್ ಓಪನ್ ಮಾಡಿ, ಒಳಗೆ ಹೋಗಬೇಕೆನ್ನುಷ್ಟರಲ್ಲಿ ಚಾಲಕ ಕಾರನ್ನು ಮುಂದೆ ವೇಗವಾಗಿ ಮೂವ್ ಮಾಡಿ, ಪೊಲೀಸನ್ನು ಸ್ವಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದ್ದಾನೆ, ನಂತರ ಅಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಬಂದು ಕಾರನ್ನು ಸುತ್ತುವರಿದು ಕಾಪಾಡಿದ್ದಾರೆ. ನಂತರ ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ನಡೆಸಿದ್ದಾರೆ.