ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ಎಂಟನೇ ಮೈಲ್ ನಲ್ಲಿ ರಸ್ತೆಗಡ್ಡವಾಗಿ ಬಂದ ಕಾಡು ಹಂದಿಯ ಹಿಂಡು ತಪ್ಪಿಸಲುಹೋಗಿ ಕಾರೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದ್ದು, ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಭ್ಯ ಮಾಹಿತಿಗಳ ಪ್ರಕಾರ ಕಾರು, ಸುಳ್ಯದಿಂದ ಕಾಸರಗೋಡು ಕಡೆಗೆ ಬರುತ್ತಿತ್ತು. ಏಕಾಏಕಿ ರಸ್ತೆಗಡ್ಡವಾಗಿ ಕಾಡುಹಂದಿ ಹಿಂಡು ಬಂದುದನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ.