ಕೇರಳದಲ್ಲಿ ಮಂಕಿಪಾಕ್ಸ್: ಪ್ರಾಥಮಿಕ ಸಂಪರ್ಕ ಪಟ್ಟಿಗೆ ಸೇರಿದ್ದಾರೆ 17ಕ್ಕೂ ಹೆಚ್ಚು ಮಂದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಕಿ ಪಾಕ್ಸ್ ದೃಢಪಟ್ಟಿರುವ ಕೇರಳದ ರೋಗಿಯ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ರೋಗಿಯ ಕುಟುಂಬ ಸದಸ್ಯರ ಪೈಕಿ ತಂದೆ ಮತ್ತು ತಾಯಿ, ಆಟೋ ಚಾಲಕ, ಟ್ಯಾಕ್ಸಿ ಚಾಲಕ, ಖಾಸಗಿ ಆಸ್ಪತ್ರೆಯ ಚರ್ಮರೋಗ ತಜ್ಞರು, ಪಕ್ಕದ ಆಸನಗಳಲ್ಲಿ ಕುಳಿತಿದ್ದ 11 ಪ್ರಯಾಣಿಕರು ಈಗ ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಇನ್ನು ವಿಮಾನ ನಿಲ್ದಾಣದ ಕ್ಲಿಯರೆನ್ಸ್ ಅಧಿಕಾರಿಗಳು, ರೋಗಿಯ ಬ್ಯಾಗೇಜ್ ಹ್ಯಾಂಡ್ಲರ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಸದ್ಯ ರೋಗಿಯ ಸ್ಥಿತಿ ಸಮಾಧಾನಕರವಾಗಿದೆ ಎಂದು ಅವರು ಹೇಳಿದ್ದಾರೆ. ಮಂಕಿ ಪಾಕ್ಸ್ ಕಾಯಿಲೆ ಕುರಿತಂತೆ ಸುಳ್ಳು ಪ್ರಚಾರ ಮಾಡದಂತೆ ಖಡಕ್ ಎಚ್ಚರಿಕೆ ನೀಡಿರುವ ಅವರು, ಯಾವುದೇ ಅನುಮಾನಗಳಿದ್ದಲ್ಲಿ ದಿಶಾ 104, 1056 ಮತ್ತು 0471 2552056 ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!