ಅನಾಥ ಮಕ್ಕಳ ಸ್ಥಿತಿ ಪ್ರಶ್ನಿಸಿದವರ ಮೇಲೆಯೇ ಪ್ರಕರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನ ದಾರುಲ್ ಉಲೂಮ್ ಸೈದಿಯಾ ಯತೀಂಖಾನಾ ಅನಾಥಾಶ್ರಮದಲ್ಲಿನ ಮಕ್ಕಳ ಸ್ಥಿತಿಗತಿ ಪ್ರಶ್ನಿಸಿದ್ದಕ್ಕೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕನುಂಗೋ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.

ಇಷ್ಟಕ್ಕೂ ಆಗಿದ್ದೇನು?

ನವೆಂಬರ್ 19 ರಂದು ಕನುಂಗೋ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಪೂರ್ವ) ಮತ್ತು ಇತರ ಅಧಿಕಾರಿಗಳ ಜೊತೆ ಈ ಆಶ್ರಮಕ್ಕೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾರು 200 ಮಕ್ಕಳನ್ನು ಕಳಪೆ ಗುಣಮಟ್ಟದಲ್ಲಿ ಇರಿಸಲಾಗಿದ್ದು ಬೆಳಕಿಗೆ ಬಂದಿತ್ತು. 100 ಚದರ ಅಡಿ ಕೊಠಡಿಗಳಲ್ಲಿ ಎಂಟು ಮಕ್ಕಳನ್ನು ಇರಿಸಲಾಗಿತ್ತು. ಉಳಿದ 5 ಕೊಠಡಿಗಳಲ್ಲಿ 40 ಮಕ್ಕಳು ವಾಸಿಸುತ್ತಿದ್ದರು. ಇದಲ್ಲದೇ 16 ಮಕ್ಕಳು ಕಾರಿಡಾರ್‌ನಲ್ಲಿದ್ದಿದ್ದು ಕೂಡಾ ಪರಿಶೀಲನೆ ವೇಳೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
ಮಕ್ಕಳನ್ನು ಸರಿಯಾದ ಶಿಕ್ಷಣ ಸಂಸ್ಥೆಗೆ ಕಳಿಸದೆ, ಇಸ್ಲಾಮಿಕ್ ಧಾರ್ಮಿಕ ಶಿಕ್ಷಣವನ್ನು ಮಾತ್ರ ಕಲಿಸುತ್ತಿದ್ದಾರೆ. ಮಕ್ಕಳಿಗೆ ಆಟದ ಸಲಕರಣೆಗಳಾಗಲೀ, ಟಿ.ವಿ. ಸೌಲಭ್ಯ, ಮಲಗಲು ಹಾಸಿಗೆ ಕೂಡ ಇಲ್ಲ. ಇದು ವ್ಯವಸ್ಥೆಯ ದುರಂತ ಎಂದು ಅವರು ವರದಿ ಮಾಡಿದ್ದರು. ಇದರ ಬೆನ್ನಿಗೇ ಜಾಮೀನು ರಹಿತ ವಾರೆಂಟ್ ಹೊರಬಿದ್ದಿದೆ.

ಅಧಿಕಾರ ಇದೆ: ಕುನುಂಗೋ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಅನಾಥಾಶ್ರಮಕ್ಕೆ ಭೇಟಿ ನೀಡಿ ಪರಿಶೀಲಿಸಲು ತಮಗೆ ಅಧಿಕಾರ ಇದೆ ಎಂದು ಪ್ರಿಯಾಂಕ್ ಕನುಂಗೋ ಹೇಳಿದ್ದಾರೆ.

ಬಡ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರೆ, ಕರ್ನಾಟಕದ ಆಡಳಿತ ಇದನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಎನ್‌ಐಎ ಸುದ್ದಿ‌ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡಾ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!