ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಣಂ ಹತ್ತಿರವಾಗುತ್ತಿದ್ದಂತೆಯೇ ಕೇರಳದಲ್ಲಿ ಗೋಡಂಬಿ ಉದ್ಯಮಕ್ಕೆ ಹೊಸ ಚೈತನ್ಯ ಸಿಕ್ಕಿದೆ! ಸರ್ಕಾರ ನೀಡುವ ಓಣಂ ಕಿಟ್‌ಗೆ ಐವತ್ತು ಗ್ರಾಮ್‌ನ 80 ಲಕ್ಷ ಪ್ಯಾಕೇಟ್‌ಗೆ ಗೋಡಂಬಿ ವ್ಯವಸ್ಥೆ ಮಾಡಲು ಗೋಡಂಬಿ ಅಭಿವೃದ್ಧಿ ನಿಗಮ ಮತ್ತು ಸಿಎಪಿಇಎಕ್ಸ್ ಸಿದ್ಧತೆ ಚುರುಕುಗೊಳಿಸಿದೆ.
ಕೊಲ್ಲಂನಲ್ಲಿರುವ ಕ್ಯಾಶ್ಯೂ ಕಾರ್ಪೋರೇಶನ್ ಕಾರ್ಖಾನೆಗೆ ಅಧಿಕಾರಿಗಳು ಭೇಟಿ ನೀಡಿದ್ದು, ಪ್ಯಾಕಿಂಗ್ ಕೆಲಸ ಆರಂಭಿಸಲು ಮಾರ್ಗದರ್ಶನ ನೀಡಿದ್ದಾರೆ. ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಜಯಮೋಹನ್ ಮತ್ತು ಕ್ಯಾಪೆಕ್ಸ್ ಅಧ್ಯಕ್ಷ ಎಂ. ಶಿವಶಂಕರ ಪಿಳ್ಳೆ ಮಾತನಾಡಿ, ಸರ್ಕಾರದ ಸೂಚನೆಯು ಗೋಡಂಬಿ ಉದ್ಯಮಕ್ಕೆ ನವೋಲ್ಲಾಸ ತಂದಿದೆ. ಇನ್ನು ಗೋಡಂಬಿ ವೀಟಾ ತಯಾರಿಸಿ ಮಕ್ಕಳಿಗೆ ನೀಡುವ ಮತ್ತು ಗೋಡಂಬಿ ಹಣ್ಣಿನಿಂದ ಫೆನಿ ಉತ್ಪಾದಿಸುವ ಯೋಜನೆ ಸರ್ಕಾರದ ಮುಂದಿದೆ ಎಂದಿದ್ದಾರೆ.