ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂ ಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಬಳಿ ನೀರು ಇಲ್ಲ, ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ಮನವಿ ಮಾಡುತ್ತೇವೆ, ರಾಜ್ಯದಲ್ಲಿ ಬಂದ್ ಸಂಪೂರ್ಣವಾಗಿದೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ, ಶಾಂತಿಯುತ ಪ್ರತಿಭಟನೆಗೆ ಸ್ಪಂದಿಸಿದ ಎಲ್ಲ ಸಂಘಟನೆಗಳನನು ಶ್ಲಾಘಿಸುತ್ತೇನೆ. ಇನ್ನು ಬಂದ್ ಶಾಂತಿಯುತವಾಗಿ ನಡೆಸಲು, ಕಾನೂನು ಸುವ್ಯವಸ್ಥೆ ಕಾಪಾಡಿದ ಅಧಿಕಾರಿಗಳಿಗೆ ಅಭಿನಂದನೆ ಎಂದಿದ್ದಾರೆ.
ಹಳೇ ಬಾಕಿ ಸರಿದೂಗಿಸಲು 3,000 ಕ್ಯುಸೆಕ್ ನೀರು ನೀಡಲು ಸೂಚನೆ ನೀಡಿದ್ದಾರೆ, ಆದರೆ ನಮ್ಮ ಬಳಿ ನೀರಿಲ್ಲ, ಇಲ್ಲದ ನೀರನ್ನು ಹೇಗೆ ಬಿಡಲು ಸಾಧ್ಯ ಎಂದಿದ್ದಾರೆ.
ಮಂಡ್ಯದಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರಿದಿದ್ದು, ಬೆಳಗ್ಗೆ 10 ಗಂಟೆಯಿಂದಲೇ ಪ್ರೊಟೆಸ್ಟ್ ಆರಂಭವಾಗಲಿದೆ.