March 20, 2026
Friday, March 20, 2026
spot_img

ಆನ್‌ಲೈನ್ ಬೆಟ್ಟಿಂಗ್ ಜಾಲಗಳ ಮೇಲೆ ಮುಗಿಬಿದ್ದ ಕೇಂದ್ರ : 300ಕ್ಕೂ ಅಧಿಕ ವೆಬ್‌ಸೈಟ್, ಆಪ್‌ಗಳಿಗೆ ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ದಂಧೆಗೆ ಕಡಿವಾಣ ಹೇರಲು ಖಡಕ್ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಇದರ ಭಾಗವಾಗಿ ಇಂದು ಮತ್ತೆ ಬರೋಬ್ಬರಿ 300ಕ್ಕೂ ಅಧಿಕ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ.

ಈಗಾಗಲೇ 8,400 ಅಧಿಕ ವೆಬ್ ಸೈಟ್ ಗಳನ್ನು ಬಂದ್ ಮಾಡಿಸಲಾಗಿದೆ. ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ಬಳಿಕ ಬರೋಬ್ಬರಿ 4,900ಸೈಟ್‌ಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಇದೀಗ ಮುಂದಿನ ಹೆಜ್ಜೆಯಾಗಿ 300ಕ್ಕೂ ಅಧಿಕ ವೆಬ್‌ಸೈಟ್, ಆಪ್‌ಗಳಿಗೆ ಬೀಗ ಜಡಿಯಲಾಗಿದೆ.

ಸತತ ದೂರುಗಳ ಹಿನ್ನಲೆಯಲ್ಲಿ ಹಾಗೂ ಆನ್‌ಲೈನ್ ಸೈಟ್‌ಗಳಲ್ಲಿನ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆನ್‌ಲೈನ್ ಕ್ರೀಡಾ ಬೆಟ್ಟಿಂಗ್,ಕ್ಯಾಸಿನೊಗಳು, ಬೆಟ್ಟಿಂಗ್ ಎಕ್ಸ್‌ಚೇಂಜ್‌ಗಳು, ಸಟ್ಟಾ, ಮಟ್ಕಾ ಜಾಲಗಳು ಮತ್ತು ರಿಯಲ್-ಮನಿ ಗೇಮ್ ಆಪ್‌ಗಳ ವಿರುದ್ಧ ಕೇಂದ್ರ ಕಠಿಣ ಕ್ರಮವನ್ನು ಮುಂದುವರಿಸಿದೆ. ದೇಶದಲ್ಲಿ ಅಕ್ರಮವಾಗಿ ಲೂಟಿ ಮಾಡುತ್ತಿರುವ ಸಂಸ್ಥೆಗಳ ಮೇಲೆ ಇನ್ನಷ್ಟು ತೀವ್ರವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ಎಚ್ಚರಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !