ಐಟಿ ಹಾರ್ಡ್ ವೇರ್ ವಲಯದ PLI ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಅನೇಕ ವಿಚಾರಗಳಿಗೆ ಅನುಮೋದನೆ ಸಿಕ್ಕಿದೆ.

ಅದೇ ರೀತಿ ಐಟಿ ಹಾರ್ಡ್ ವೇರ್ ವಲಯಕ್ಕೆ 17,000 ಕೋಟಿ ರೂ.ಗಳ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ, ಈ ವರ್ಷ ದೇಶದಲ್ಲಿ 100 ಬಿಲಿಯನ್ ಡಾಲರ್ ಉತ್ಪಾದಿಸಲಾಗಿದೆ . ಇದರೊಂದಿಗೆ, ಕಳೆದ ವರ್ಷ ದಾಖಲೆಯ $ 11 ಬಿಲಿಯನ್ ಮೌಲ್ಯದ ಮೊಬೈಲ್ ರಫ್ತು ಮಾಡಲಾಗಿದೆ. ಐಟಿ ಹಾರ್ಡ್ ವೇರ್ ವಲಯಕ್ಕೆ 17,000 ಕೋಟಿ ರೂ.ಗಳ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಅಂತ ತಿಳಿಸಿದರು.

ಐಟಿ ಹಾರ್ಡ್ ವೇರ್ ವಲಯದ ಕಾರ್ಯಕ್ರಮದ ಅವಧಿ ಆರು ವರ್ಷಗಳು . ಐಟಿ ಹಾರ್ಡ್ವೇರ್ ಪಿಎಲ್‌ಐ ಸ್ಕೀಮ್ 2 ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು, ಸುಸಜ್ಜಿತ ಪರ್ಸನಲ್ ಕಂಪ್ಯೂಟರ್ಗಳು (ಆಲ್-ಇನ್-ಒನ್ ಪಿಸಿ) ಸರ್ವರ್ಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಪ್ರೋತ್ಸಾಹಕ ಯೋಜನೆಯು 3.35 ಲಕ್ಷ ಕೋಟಿ ರೂ.ಗಳನ್ನು ಉತ್ಪಾದಿಸುತ್ತದೆ ಮತ್ತು 2,430 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!