ದೇಶದ 23 ಏಮ್ಸ್‌ಗಳ ಮರುನಾಮಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ‌
ದೇಶದ ಪ್ರಸಿದ್ಧ ವೈದ್ಯಕೀಯ ಸಂಸ್ಥೆಯಾದ ಏಮ್ಸ್‌ ಗಳಿಗೆ(ಎಐಐಎಂಎಸ್) ಮರುನಾಮಕರಣ ಮಾಡಲು ಚಿಂತಿಸಲಾಗುತ್ತಿದ್ದು ಪ್ರಾದೇಶಿಕ ವೀರರು, ಸ್ವಾತಂತ್ರ್ಯ ಹೋರಾಟಗಾರರು, ಐತಿಹಾಸಿಕ ಘಟನೆಗಳು, ಸ್ಮಾರಕಗಳು ಅಥವಾ ಅವರ ವಿಶಿಷ್ಟ ಭೌಗೋಳಿಕ ಗುರುತನ್ನು ಆಧರಿಸಿ ದೆಹಲಿ ಸೇರಿದಂತೆ ಎಲ್ಲಾ ಏಮ್ಸ್‌ಗಳಿಗೆ ನಿರ್ದಿಷ್ಟ ಹೆಸರುಗಳನ್ನು ನೀಡುವ ಪ್ರಸ್ತಾಪವನ್ನು ಸರ್ಕಾರ ಅಂಗೀಕರಿಸಿದೆ.

ಪ್ರಸ್ತುತ 23 ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗಳಲ್ಲಿ ಬಹುತೇಕ ಏಮ್ಸ್‌ ಸಂಸ್ಥೆಗಳು ಹೆಸರುಗಳ ಪಟ್ಟಿಯನ್ನು ಸಲ್ಲಿಸಿದ್ದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಕುರಿತು ಇತರರಿಂದ ಸಲಹೆಗಳನ್ನು ಕೇಳಿದೆ ಎಂದು ಮೂಲಗಳು ವರದಿ ಮಾಡಿವೆ.

ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY) ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ AIIMSಗಳಲ್ಲಿ ಹಲವು ಕಾರ್ಯ ನಿರ್ವಹಿಸುತ್ತಿವೆ ಅವುಗಳು ಅದೇ ಸಾಮಾನ್ಯ ಹೆಸರಿನಿಂದ ಕರೆಯಲ್ಪಡುತ್ತವೆ ಮತ್ತು ಅವುಗಳ ಸ್ಥಳದಿಂದ ಮಾತ್ರ ಗುರುತಿಸಲ್ಪಡುತ್ತವೆ. ಪ್ರಸ್ತುತ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ 23 ಏಮ್ಸ್‌ಗಳಿಗೆ ನಿರ್ದಿಷ್ಟ ಹೆಸರುಗಳನ್ನು ನೀಡಲು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ, ಇದರಲ್ಲಿ ಸಂಪೂರ್ಣ ಕ್ರಿಯಾತ್ಮಕ, ಭಾಗಶಃ ಕಾರ್ಯಾಚರಣೆ ಅಥವಾ ನಿರ್ಮಾಣ ಹಂತದಲ್ಲಿರುವ ಏಮ್ಸ್‌ ಗಳೂ ಸೇರಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!