ಉಗ್ರರ ವಿರುದ್ಧ ಹೋರಾಡಲು ಕಾಶ್ಮೀರದಲ್ಲಿ 300 ಸ್ಪೆಷಲ್ ಕಮಾಂಡೋ ನಿಯೋಜಿಸಿದ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿನ ಉಗ್ರರ ಉಪಟಳ ಹೆಚ್ಚುತ್ತಿದ್ದು, ಈ ನಡುವೆ ಸಂಪೂರ್ಣ ಹತ್ತಿಕ್ಕಲು ಕೇಂದ್ರ ಸರ್ಕಾರ ವಿಶೇಷ ತರಬೇತಿ ಪಡೆದಿರುವ 300 ಕಮಾಂಡೋಗಳನ್ನು ನಿಯೋಜಿಸಿದೆ.

ಸ್ಪೆಷಲ್ ಆಪರೇಶನ್ ಗ್ರೂಪ್ ಕಮಾಂಡೋಗಳನ್ನು 43 ಸೂಕ್ಷ್ಮ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಲಿದೆ. ಈ ಕಮಾಂಡೋಗಳಿಗೆ ಉಗ್ರರನ್ನು ಭೇಟೆಯಾಡಲು ಸಂಪೂರ್ಣ ಅಧಿಕಾರ ನೀಡಿದೆ.

ಇಷ್ಟು ದಿನ ಪೊಲೀಸ್ ಠಾಣ ವ್ಯಾಪ್ತಿಯಲ್ಲೇ ಜಮ್ಮ ಮತ್ತು ಕಾಶ್ಮೀರ ಪೊಲೀಸರು ಉಗ್ರರ ವಿರುದ್ದ ಹೋರಾಟಕ್ಕಿಳಿಯುತ್ತಿದ್ದರು.ಜೊತೆಗೆ ಭಾರತೀಯ ಸೇನೆಯೂ ಸಾಥ್ ನೀಡುತ್ತಿತ್ತು. ಇದೀಗ ಈ ಸ್ಪೆಷಲ್ ಕಮಾಂಡೋಗಳು ಉಗ್ರರ ಹತ್ಯೆಗೆ ಹೋರಾಟ ಶುರುಮಾಡಲಿದೆ.

ಸ್ಪೆಷಲ್ ಆಪರೇಷನ್ ಗ್ರೂಪ್ ಕಮಾಂಡೋಗಳಿಗೆ ಬುಲೆಟ್‌ಫ್ರೂಫ್ ವಾಹನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸಂಪೂರ್ಮ ಶಾಂತಿ ನೆಲೆಸುವಂತೆ ಮಾಡುವುದೇ ಈ ಕಮಾಂಡೋಗಳ ಮೊದಲ ಗುರಿ.

ಒಂದೆಡೆ ಪಾಕಿಸ್ತಾನ ಸೇನೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಈ ಮೂಲಕ ಗಡಿ ನಿಯಮ ಉಲ್ಲಂಘಿಸಿದೆ. ಅಪ್ರಚೋದಿತ ದಾಳಿಗೆ ಭಾರತ ತಕ್ಕ ತಿರುಗೇಟು ನೀಡಿದೆ. ಇದೇ ವೇಳೆ ಗಡಿ ನಿಯಂತ್ರಣಾ ರೇಖೆ ಬಳಿ ಪಾಕ್‌ ಆಕ್ರಮಿತ ಕಾಶ್ಮೀರದಿಂದ ಕುಪ್ವಾರ ಬಳಿಯ ಮಚ್ಚಿಲ್‌ ಸಮೀಪ ಭಾರತಕ್ಕೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಐವರು ಲಷ್ಕರ್ ಎ ತೊಯ್ಬಾ ಉಗ್ರರರನ್ನು ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!