ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ಅಡಿಯಲ್ಲಿ ತರಲು ಕೇಂದ್ರ ಸರಕಾರ ಸಿದ್ದ…ಆದರೆ: ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ಅಡಿಯಲ್ಲಿ ತರಲು ಮೋದಿ ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.

ಆದರೆ, ಪ್ರಮುಖವಾಗಿ ಇಂಧನ ಮತ್ತು ಮದ್ಯ ಆದಾಯ ಉತ್ಪಾದಿಸುವುದರಿಂದ ರಾಜ್ಯಗಳು ಅಂತಹ ಪ್ರಸ್ತಾಪ ಒಪ್ಪುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು, ರಾಜ್ಯಗಳು ಒಪ್ಪಿಗೆ ನೀಡಬೇಕು. ರಾಜ್ಯಗಳು ಕ್ರಮ ಕೈಗೊಂಡರೆ, ನಾವು ಸಿದ್ಧರಿದ್ದೇವೆ.

ನಾವು ಎಲ್ಲಾ ಸಮಯದಲ್ಲೂ ಸಿದ್ಧರಿದ್ದೇವೆ. ಇದು ನನ್ನ ತಿಳಿವಳಿಕೆಯಾಗಿದೆ. ಅದನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುದು ಮತ್ತೊಂದು ಸಮಸ್ಯೆ. ಆ ಪ್ರಶ್ನೆ ವಿತ್ತ ಸಚಿವರಿಗೆ ತಿಳಿಸಬೇಕು ಎಂದು ತಿಳಿಸಿದರು.

ಕೇರಳ ಹೈಕೋರ್ಟ್ ಕೂಡ ಇಂಧನವನ್ನು ಜಿಎಸ್​​ಟಿ ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಚರ್ಚಿಸುವಂತೆ ನಿರ್ದೇಶನ ನೀಡಿತ್ತು. ಹಾಗಾಗಿ ಕಳೆದ ತಿಂಗಳು ಲಖನೌನಲ್ಲಿ ನಡೆದ ಸಭೆಯಲ್ಲಿ ಅದನ್ನು ಅನುಸರಿಸಲಾಗಿದೆ. ಆದರೆ, ರಾಜ್ಯಗಳು ಸಮ್ಮತಿಸಿಲ್ಲ. ನಿಮ್ಮ ಬಯಕೆಯೇ ನನ್ನದೂ ಆಗಿದೆ. ಆದರೆ, ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!