ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಇಂದು ಕೇಂದ್ರ ಸರಕಾರ ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅಪ್ಲಿಕೇಶನ್) ನಿಯಂತ್ರಣ ಮಸೂದೆ- 2019 ಅನ್ನು ಹಿಂಪಡೆದಿದೆ.
ಮಣಿಪುರ ಹಿಂಸಾಚಾರ ವಿಚಾರವಾಗಿ ವಿರೋಧ ಪಕ್ಷಗಳು ನಡೆಸುತ್ತಿದ್ದ ಗದ್ದಲದ ನಡುವೆಯೇ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಸೂದೆಯನ್ನು ಹಿಂಪಡೆದರು.
ಸಂತ್ರಸ್ತರು, ಅಪರಾಧಿಗಳು, ಶಂಕಿತರು, ವಿಚಾರಣಾಧೀನ ಕೈದಿಗಳು, ನಾಪತ್ತೆಯಾದವರು ಮತ್ತು ಅಪರಿಚಿತ ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್‌ಎ ತಂತ್ರಜ್ಞಾನ ಬಳಕೆ ಮಾಡುವುದನ್ನು ನಿಯಂತ್ರಿಸುವುದು ಈ ಮಸೂದೆಯ ಉದ್ದೇಶವಾಗಿತ್ತು. 2019 ಜುಲೈ 8ರಂದು ಪರಿಚಯಿಸಲಾಗಿತ್ತು.