ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯೊಬ್ಬಳು ತನ್ನ ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿ ನಿರ್ದಯಿಯಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಶಿಶುವಿನ ಬಾಯಿಗೆ ಮೆಣಸಿನಪುಡಿ ಹಾಕುತ್ತಿರುವ ವಿಡಿಯೋವನ್ನು ಮಹಿಳೆಯ ಪತಿಯೇ ವಿಡಿಯೋ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆಯು ಮಂಜನ್‌ಪುರ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ನೆಲೆಸಿರುವ ಸತ್ಯೇಂದ್ರ ಕುಮಾರ್ ಎರಡು ವರ್ಷಗಳ ಹಿಂದೆ ಶ್ವೇತಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಸ್ವಲ್ಪ ಸಮಯದ ನಂತರ ಶ್ವೇತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಸತ್ಯೇಂದ್ರ ಕುಮಾರ್ ಬಹ್ರೈಚ್‌ನಲ್ಲಿ ಸರ್ಕಾರಿ ಶಿಕ್ಷಕರಾಗಿದ್ದಾರೆ.ಕೆಲಸಕ್ಕೆಂದು ಹೋದಾಗ ಪತ್ನಿ ಮಗುವಿಗೆ ಥಳಿಸುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಸತ್ಯೇಂದ್ರ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಕುಟುಂಬ ಸದಸ್ಯರಿಗೆ ಹೇಳಿದಾಗ ಯಾರೂ ನಂಬಲಿಲ್ಲ ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಸತ್ಯೇಂದ್ರ ಅವರು ಪತ್ನಿಯ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದರು.