ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಡೇ ಕೇರ್ ಸೆಂಟರ್ ಮೂರನೇ ಮಹಡಿಯಿಂದ ಬಿದ್ದು ಮಗು ಸಾವನ್ನಪ್ಪಿದೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಮಗು ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಮೃತಪಟ್ಟಿದೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಿಶುವಿಹಾರದಲ್ಲಿ ವ್ಯಾಸಂಗ ಮಾಡುತ್ತಿದ್ದ ಜೀನಾ ಎಂಬ ಮಗು ಮೃತಪಟ್ಟ ದುರ್ದೈವಿ. ಇವರು ಕೇರಳದ ಇಂಜಿನಿಯರಿಂಗ್ ದಂಪತಿಗಳಾದ ಜೀತು ಟಾಮಿ ಜೋಸೆಫ್ ಮತ್ತು ಬಿನಿಟೋ ಥಾಮಸ್ ಅವರ ಪುತ್ರಿ. ಜನವರಿ 22 ರಂದು ಮಧ್ಯಾಹ್ನ, ಎರಡನೇ ಮಹಡಿಯಲ್ಲಿ ಆಟವಾಡುತ್ತಿದ್ದಾಗ, ಜೀನಾ ಮೂರನೇ ಮಹಡಿಯಿಂದ ಬಿದ್ದು ತಲೆಗೆ ಗಾಯವಾಯಿತು. ಕೂಡಲೇ ಈ ಮಗುವನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ದಿನ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.