ಹೊಸದಿಗಂತ ಕಲಬುರಗಿ:
ತಲೆಯ ಮೇಲೆ ಶಾಲಾ ವಾಹನ ಹರಿದು ಮೂರು ವರ್ಷದ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪೂರ ಗ್ರಾಮದಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಶಿವಪುರ ಗ್ರಾಮದ ರಾಜಶೇಖರ ಬನ್ನಟ್ಟಿ ಎಂಬುವವರ ಪುತ್ರಿ ಖುಷಿ ಬನ್ನಟ್ಟಿ (3) ಎಂಬ ಮುಗ್ದ ಮಗುವೆ ಶಾಲಾ ವಾಹನದ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.
ಶಾಲಾ ವಾಹನದಲ್ಲಿ ಬಂದಿದ್ದ ಅಣ್ಣನನ್ನು ಕರೆಯಲು ತಂದೆಯ ಹಿಂದೆಯೇ ಓಡೋಡಿ ಬಂದಿದ್ದ ಮಗು,ಮಗಳು ತನ್ನ ಹಿಂದೆಯೇ ಬಂದ್ದಿದ್ದು ತಂದೆಗೆ ಅರಿವಾಗಿಲ್ಲ. ಈ ವೇಳೆ ಚಾಲಕ ವಾಹನವನ್ನು ಹಿಂದಕ್ಕೆ ತಿರುಗಿಸುವ ಸಮಯದಲ್ಲಿ ವಾಹನದ ಚಕ್ರಕ್ಕೆ ಸಿಲುಕಿ ಮಗುವಿನ ತಲೆಯ ಮೇಲೆ ಶಾಲಾ ವಾಹನ ಹರಿದು ಹೋಗಿದೆ.
ಇನ್ನೂ ಚಾಲಕ ಶ್ರೀಶೈಲ ಎಂಬಾತನ ದಿವ್ಯ ನಿರ್ಲಕ್ಷ್ಯದಿಂದಾಗಿ ಮಗುವೊಂದು ಬಲಿಯಾಗಿದ್ದು, ಆತನನ್ನು ಬಂಧನ ಮಾಡಲಾಗಿದೆ. ಈ ಕುರಿತು ಅಫಜಲಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.