ಇನ್ನೂ ಆರು ದಿನ ಲಂಕೆಯಲ್ಲೇ ಮೊಕ್ಕಾಂ ಹೂಡಲಿದೆ ಚೀನಾದ ಕಣ್ಗಾವಲು ಹಡಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆಕ್ಷೇಪಗಳ ನಡುವೆಯೂ ಶ್ರೀಲಂಕಾದ ಹಂಬಂಟೋಟಾದಲ್ಲಿರುವ ಚೀನಾ ನಿರ್ಮಿತ ಬಂದರಿಗೆ ಬಂದು ನಿಂತಿರುವ ಚೀನಾದ ಯುವಾನ್ ವಾಂಗ್ 5 ಕಣ್ಗಾವಲು ಹಡಗು ಇನ್ನೂ ಆರು ದಿನಗಳ ಕಾಲ ಇಲ್ಲಿಯೇ ಮೊಕ್ಕಾಂ ಹೂಡಲಿದೆ.

ಯುವಾನ್ ವಾಂಗ್ 5 ಹಡಗು ಆಗಮಿಸುತ್ತಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿ, ಆಕ್ಷೇಪಿಸಿತ್ತು. ಇದರ ಹೊರತಾಗಿಯೂ ಶ್ರೀಲಂಕಾ ಚೀನಾ ಹಡಗಿಗೆ ಅನುಮತಿ ನೀಡಿದೆ. ಚೀನಾದ ಈ ಹಡಗು ಹೊಸ ಪೀಳಿಗೆಯ ಬಾಹ್ಯಾಕಾಶ ವಿಚಕ್ಷಣಾ ಹಡಗುಗಳಲ್ಲಿ ಒಂದಾಗಿದೆ ಎಂದು ಭದ್ರತಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ಉಪಗ್ರಹ, ರಾಕೆಟ್ ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳ ಮೇಲೆ ಕಣ್ಣಿಡಲಿದೆ ಎಂದು ತಿಳಿಸಿದ್ದಾರೆ.

ಆದರೆ ಶ್ರೀಲಂಕಾ ಇಂಧನ ಮತ್ತು ಇತರ ಸರಬರಾಜುಗಳನ್ನು ತೆಗೆದುಕೊಳ್ಳಲು ಆರು ದಿನಗಳವರೆಗೆ ಈ ಹಡಗು ಉಳಿಯುತ್ತದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!