ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವ ಸಿದ್ದರಾಮಯ್ಯನವರಿಗೆ ಭರಪೂರ ಶುಭಾಷಯಗಳು ಸುರಿಮಳೆಯಾಗುತ್ತಿದೆ. ಇತ್ತ ನೂತನ ಮುಖ್ಯಮಂತ್ರಿಯನ್ನು ಬರಮಾಡಿಕೊಳ್ಳಲು ವಿಧಾನಸೌಧದಲ್ಲಿರುವ ಸಿಎಂ ಕಚೇರಿ ಮದುಮಗಳಂತೆ ಅಲಂಕೃತವಾಗಿದೆ.
ಬಗೆ ಬಗೆಯ ಹೂಗಳಿಂದ ಸಿಎಂ ಕೊಠಡಿಯನ್ನು ಅಲಂಕರಿಸಲಾಗಿದೆ. ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323ರ ಬಾಗಿಲಿಗೆ ಹೊಸದಾಗಿ ಪಾಲಿಶ್ ಮಾಡಿಸಿದ್ದು, ಥಳ ಥಳ ಹೊಳೆಯುತ್ತಿದೆ. ಹೊಸ ಸಿಎಂ ಬರುವಿಕೆಗಾಗಿ ಸಿಎಂ ಕಚೇರಿ ಎದುರು ನೋಡುತ್ತಿದೆ. ಇದುವರೆಗೂ ಇದ್ದ ನಿರ್ಗಮಿತ ಸಿಎಂ ಬೊಮ್ಮಾಯಿ ಅವರ ನಾಮಫಲಕವಿದ್ದ ಜಾಗದಲ್ಲಿ ಸಿದ್ದರಾಮಯ್ಯ ನಾಮಫಲಕ ಬಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ನಾಮಫಲಕ ಬದಲಾವಣೆ ಮಾಡಲಾಗುತ್ತದೆ.