ನೇರಪ್ರಸಾರ ವೇಳೆ ಕುಸಿದುಬಿದ್ದ ನಿರೂಪಕಿ ನೆರವಿಗೆ ಧಾವಿಸಿದ ಬಂದ ರಿಷಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಷನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಭಾರತ ಮೂಲದ ರಿಷಿ ಸುನಕ್ ಅವರು ಮತ್ತೊಮ್ಮೆ ಚರ್ಚೆಗೆ ಗ್ರಾಸರಾಗಿದ್ದಾರೆ. ಬ್ರಿಟನ್ ಪ್ರಧಾನಿ ಚುನಾವಣಾ ಚರ್ಚೆಯ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ನಿರೂಪಕಿ ಏಕಾಏಕಿ ಕುಸಿದುಬಿದ್ದರು. ಈ ವೇಳೆ, ರಿಷಿ ಅವರು ಧಾವಿಸಿ ನಿರೂಪಕಿ ಅವರಿಗೆ ನೆರವು ನೀಡಿದರು. ಈ ಘಟನೆಯಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕಗೊಳಿಸಲಾಯಿತು.

ನೇರ ಪ್ರಸಾರ ಕಾರ್ಯಕ್ರಮದ ವೇಳೆ ಟಿವಿ ನಿರೂಪಕಿ ಕ್ಯಾಟೆ ಮೆಕ್ಯಾನ್ ಅವರು ದಿಢೀರ್ ಕುಸಿದುಬಿದ್ದರು. ಈ ಸಂದರ್ಭದಲ್ಲಿ ರಿಷಿ ಮತ್ತಿತರರು ಕ್ಯಾಟೆ ಅವರ ನೆರವು ಧಾವಿಸಿದರು. ವೈದ್ಯಕೀಯ ಸಲಹೆ ಮೇರೆಗೆ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು. ಅನಿರೀಕ್ಷಿತ ಘಟನೆ ವೀಕ್ಷಕರಿಗೆ ಕ್ಷಮೆಯಾಚಿಸುತ್ತೇವೆ ಎಂದು ಸುದ್ದಿವಾಹಿನಿ ಟಾಕ್ ಟಿವಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!