ಬ್ರಿಟನ್‌ ನ ನೂತನ ರಾಜ 3ನೇ ಕಿಂಗ್‌ ಚಾರ್ಲ್ಸ್ ಪಟ್ಟಾಭಿಷೇಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರಿಟನ್‌ಗೆ ನೂತನ ರಾಜನಾಗಿ ಇಂದು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ 3ನೇ ಕಿಂಗ್ ಚಾರ್ಲ್ಸ್ ರಾಜ ಕಿರೀಟ ತೊಟ್ಟಿದ್ದಾರೆ.
ಕ್ವೀನ್ ಎಲಿಜಬೆತ್ ನಿಧನದ ಬಳಿಕ 2022ರ ಸೆಪ್ಟೆಂಬರ್‌ನಲ್ಲಿ ಚಾರ್ಲ್ಸ್ ನೂತನ ರಾಜನಾಗಿ ನೇಮಕಗೊಂಡಿದ್ದರು. ಇಂದು ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕ ನಡೆದಿದೆ. ಬ್ರಿಟನ್ ರಾಜನ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್‌ಗೆ ರಾಜ ಕಿರೀಟ ತೊಡಿಸಲಾಗಿದೆ. ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ ಕಿರೀಟ ಪಡೆದು ರಾಜ ಚಾರ್ಲ್ಸ್‌ಗೆ ತೊಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟನ್ ರಾಯಲ್ ಏರ್‌ಪೋರ್ಸ್ ಧ್ವಜ ಮೆರವಣಿಗೆ ನಡೆಸಿದೆ. ಈ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಎಲ್ಲಾ ರಾಜಾಧಿಕಾರವನ್ನು ಕಿಂಗ್ ಚಾರ್ಲ್ಸ್‌ಗೆ ಹಸ್ತಾಂತರಿಸಲಾಗಿದೆ. ಕಿಂಗ್ ಚಾರ್ಲ್ಸ್ ಜೊತೆ ರಾಣಿ ಕ್ಯಾಮಿಲಾ ಪಟ್ಟಾಭಿಷೇಕವೂ ನಡದೆದಿದೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಸಂಭ್ರಮದ ವಾತಾರವಣ ನಿರ್ಮಾಣವಾಗಿದೆ.

ಇದು ರಾಷ್ಟ್ರೀಯ ಹೆಮ್ಮೆಯ ಕ್ಷಣ. ಇದು ಬ್ರಿಟನ್ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳ ಅಭಿವ್ಯಕ್ತಿಯಾಗಿದೆ. ನಮ್ಮ ದೇಶದ ಆಧುನಿಕತೆಯಲ್ಲಿ ಎದ್ದುಕಾಣುವ ಅತ್ಯಂತ ಮಹತ್ವದ ಕಾರ್ಯಕ್ರಮ ಎಂದು ರಿಷಿ ಸುನಕ್ ಹೇಳಿದ್ದಾರೆ.

ಬ್ರಿಟನ್ ರಾಜನಾಘಿ ಅಧಿಕೃತವಾಗಿ ಪಟ್ಟಕ್ಕೇರಿದ ಕಿಂಗ್ ಚಾರ್ಲ್ಸ್‌ಗೆ ಅಮೇರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್ ಸೇರಿದಂತೆ ಹಲವು ದೇಶದ ಗಣ್ಯರು ಅಭಿನಂದನ ಸಲ್ಲಿಸಿದ್ದಾರೆ.

ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೇರಿದಂತೆ ಹಲವು ಗಣ್ಯರು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜಗದೀಪ್ ಧನ್ಕರ್ ಭಾರತ ಸರ್ಕಾರದ ಪ್ರತಿನಿಧಿಯಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!