ಅಯೋದ್ಯೆ ಶ್ರೀ ರಾಮಮಂದಿರಕ್ಕೆ ತಲುಪಿತು ದೇಶದ ಅತೀ ದೊಡ್ಡ ಘಂಟೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋದ್ಯೆ ಶ್ರೀ ರಾಮಮಂದಿರ (Ram Mandir) ಉದ್ಘಾಟನೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ದೇಶ ವಿದೇಶಗಳಿಂದ ಶ್ರೀ ರಾಮನಿಗಾಗಿ ಕೊಡುಗೆಗಳು ಬರುತ್ತಿದೆ.

ಇದೀಗ 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ (Etah) ಜಿಲ್ಲೆಯ ಜಲೇಸರ್ ಪಟ್ಟಣದಿಂದ ಅಯೋಧ್ಯೆ ತಲುಪಿದೆ. ಇದು ದೇಶದ ಅತೀ ಗೊಡ್ಡ ಘಂಟೆಯೂ ಆಗಿದೆ.

ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್‌ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು, ಮಂಗಳವಾರ ಅಯೋಧ್ಯೆಗೆ ತಲುಪಿದೆ.

ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!