ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೊದಲ 3-ಡಿ ಮುದ್ರಿತ ಅಂಚೆ ಕಚೇರಿ ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ.
ಹಲಸೂರಿನ ಬಜಾರ್ ಅಂಚೆ ಕಚೇರಿಯು ಭಾರತದ, ಕರ್ನಾಟಕದ ಮೊದಲ 3-ಡಿ ಮುದ್ರಿತ ಸಾರ್ವಜನಿಕ ಕಟ್ಟಡವಾಗಲಿದೆ. ಈಗಾಗಲೇ ಅಂಚೆ ಕಚೇರಿ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇನ್ನೇನು ಒಂದು ತಿಂಗಳಲ್ಲಿ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸಾಂಪ್ರದಾಯಿಕ ಕಟ್ಟಡ ನಿರ್ಮಾಣಕ್ಕಿಂತ ಶೇ.30-40ರಷ್ಟು ವೆಚ್ಚ ಕಡಿಮೆಯಾಗಿದ್ದು, ಮೇ.೬ರಂದು ಕರ್ನಾಟಕ ತನ್ನ ಮೊದಲ 3-ಡಿ ಮುದ್ರಿತ ಅಂಚೆ ಕಚೇರಿ ಹೊಂದಲಿದೆ.
ಇದನ್ನು ನಿರ್ಮಿಸಲು 23 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಲಾರ್ಸೆನ್ ಆಂಡ್ ಡುಬ್ರೋ ಪ್ರೈವೇಟ್ ಲಿಮಿಟೆಡ್ ಈ ತಂತ್ರಜ್ಞಾನವನ್ನು ನಿರ್ಮಿಸಿದೆ. ಈ ಕಚೇರಿ ನಿರ್ಮಾಣಕ್ಕೆ 6-8ತಿಂಗಳು ಸಮಯ ಹಿಡಿಯುವುದಿಲ್ಲ, ಇದರ ನಿರ್ಮಾಣಕ್ಕೆ ಬೇಕಿರುವುದು ಕೇವಲ 45 ದಿನಗಳು ಮಾತ್ರ. ಅಲ್ಲದೇ ಕೆಲಸಕ್ಕೆ ಹತ್ತಾರು ಜನ ಬೇಕೆಂದೂ ಇಲ್ಲ, ಬೇಕಿರುವುದು ಐವರು ಮಾತ್ರ ಎಂದು ಲಾರ್ಸೆನ್ ಕನ್ಸ್‌ಟ್ರಕ್ಷನ್ ಉಪಾಧ್ಯಕ್ಷ ವಿ.ಎಂ ಸತೀಶ್ ಹೇಳಿದ್ದಾರೆ.