ಮೇಷ
ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಗುರಿ ಸಾಧಿಸಲು ಏಕಾಗ್ರತೆ ಅಗತ್ಯ.ಈಗ ಮನಸ್ಸು ಹಲವಾರು ವಿಷಯಗಳಲ್ಲಿ ಹರಿದಾಡುತ್ತಿದೆ.
ವೃಷಭ
ನೀವು ಸಾಧಿಸಬಯಸಿದ ಗುರಿ ಸಮೀಪವಾಗಲಿದೆ.ಹೆಚ್ಚಿನ ಶ್ರಮವಿಲ್ಲದೆ ಉದ್ದೇಶ ಸಾಧಿಸುವಿರಿ. ನಿಮ್ಮ ಆತ್ಮೀಯರನ್ನು ಕಡೆಗಣಿಸಬೇಡಿ.
ಮಿಥುನ
ನಿಮ್ಮ ಸುತ್ತಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟ ಪಡುವಿರಿ.ಇತರರ ಜತೆ ಬೆರೆಯುವ ಮನೋಭಾವ ಇರಲಿ. ಕೌಟುಂಬಿಕ ಬೇಡಿಕೆ ಈಡೇರಿಸಿ.
ಕಟಕ
ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅಪನಂಬಿಕೆ ಬೇಡ. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಎಲ್ಲವನ್ನೂ ಸಾಧಿಸುವಿರಿ. ಜಡವಾಗಿ ಕೂತುಕೊಳ್ಳದಿರಿ.
ಸಿಂಹ
ಹಣಕಾಸು ಸ್ಥಿತಿಯ ಬಗ್ಗೆ ಚಿಂತಿಸಬೇಡಿ.ಅದು ಸುಧಾರಿಸುತ್ತದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ನಿಮಗೆ ಲಾಭವಾಗಲಿದೆ.ಆಪ್ತರಿಂದ ನೆರವು.
ಕನ್ಯಾ
ಕಠಿಣ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸುವಿರಿ. ಕೌಟುಂಬಿಕ ಭಿನ್ನಮತ ಉಂಟಾದೀತು. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ.
ತುಲಾ
ನಿಮ್ಮ ಪ್ರೀತಿಗೆ ಸೂಕ್ತ ಸ್ಪಂದನೆ ದೊರಕದಿದ್ದರೆ ನಿರುತ್ಸಾಹ ಪಡಬೇಡಿ. ಮುಂದೆ ಒಳಿತಾಗುವುದು. ಮನೆ ಮತ್ತು ವೃತ್ತಿಯಲ್ಲಿ ಹೆಚ್ಚಿನ ಹೊಣೆಗಾರಿಕೆ.
ವೃಶ್ಚಿಕ
ಯಾವುದೋ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತಾಳಲಾರದೆ ಗೊಂದಲ. ಹಳೆಯ ತಪ್ಪು ನೆನಪಿಸಿ ಕೊರಗದಿರಿ. ಭವಿಷ್ಯಕ್ಕೆ ಸೂಕ್ತ ಯೋಜನೆ ಹಾಕಿರಿ.
ಧನು
ಪ್ರಮುಖ ಬೆಳವಣಿಗೆಯು ಕುಟುಂಬ ಸದಸ್ಯರನ್ನು ಜತೆ ಸೇರಿಸಲಿದೆ. ಕೆಲವು ಒತ್ತಡಗಳು ಮನಸ್ಸಿನ ನೆಮ್ಮದಿ ಕಲಕಲೂ ಬಹುದು.ಯೋಗ, ಧ್ಯಾನ ಸಹಕಾರಿ.
ಮಕರ
ಮಾತಿನಲ್ಲಿ ಹಿಡಿತವಿರಲಿ. ಅನಿರೀಕ್ಷಿತವಾದುದು ಬಾಯಿಂದ ಹೊರಬರದಂತೆ ನೋಡಿಕೊಳ್ಳಿ. ಇತರರಿಗೆ ಮುಜುಗರ ಆಗುವಂತೆ ನಡಕೊಳ್ಳದಿರಿ.
ಕುಂಭ
ಕುಟುಂಬಸ್ಥರ ಸಂಗದಲ್ಲಿ ಸಂತೋಷ. ಖರೀದಿಯ ಉತ್ಸಾಹದಲ್ಲಿ ಜೇಬಿಗೆ ತೂತು ಮಾಡಿಕೊಳ್ಳಬೇಡಿ. ಅನಿರೀಕ್ಷಿತ ಸುದ್ದಿ ಹರ್ಷ ತಂದೀತು.
ಮೀನ
ಮನೆಯವರ ಜತೆ ವಾಗ್ವಾದ ಮಾಡಿ ಗೆದ್ದೆನೆಂದು ಬೀಗದಿರಿ.ಅದು ಕೌಟುಂಬಿಕ ನೆಮ್ಮದಿ ಹಾಳು ಮಾಡೀತು.ಹೊಂದಾಣಿಕೆ ಮುಖ್ಯ.