ನಿಂತಿಲ್ಲ‌ ಕೋವಿಡ್ ಕಾಟ: ರಾಜ್ಯದಲ್ಲಿ ಹೇಗಿದೆ ಗೊತ್ತಾ ಸೋಂಕಿನ ಅಂಕಿಅಂಶ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಮಾರಿ ಕೋವಿಡ್ ನ ತೆರೆಮರೆಯ ಆಟ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 359 ಸೋಂಕು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 40,62,833ಕ್ಕೆ ಏರಿಕೆಯಾಗಿದೆ.
ಸಮಾಧಾನಕರ ಸಂಗತಿ ಎಂದರೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ.

ಕಳೆದ‌ 24 ಗಂಟೆಗಳಲ್ಲಿ ಯಾವುದೇ ಕೋವಿಡ್ ಸಂಬಂಧಿ ಸಾವು ವರದಿಯಾಗಿಲ್ಲ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 218 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ನಗರದಲ್ಲಿ 1870897 ಮಂದಿ ಸೋಂಕಿತರಿದ್ದಾರೆ.
ಇದೇ ಅವಧಿಯಲ್ಲಿ 499‌ ಮಂದಿ ಸೋಂಕು ಮುಕ್ತರಾಗಿದ್ದಾರೆ ಎಂದು‌ ಅರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!