Saturday, April 1, 2023

Latest Posts

ಮಾರ್ಚ್ ಅಂತ್ಯಕ್ಕೆ ಆರಂಭವಾಗಲಿದೆ ಗೋಶಾಲೆ, ರಾಜ್ಯದಲ್ಲಿ ಇದೇ ಮೊದಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮೊದಲ ಗೋಶಾಲೆ ಗದಗದಲ್ಲಿ ಆರಂಭವಾಗಲಿದೆ. ಕರ್ನಾಟಕದ ಮೊದಲ ಗೋಶಾಲೆ ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ. ಗದಗ ಶಾಸಕ ಎಚ್.ಕೆ. ಪಾಟೀಲ ಕುರ್ತಕೋಟಿ ಗ್ರಾಮಕ್ಕೆ ಭೇಟಿ ನೀಡಿ, ಗೋಶಾಲೆಗೆ ಜಾಗ ಗುರುತಿಸಿದ್ದರು. ಜತೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾರ್ಯಾರಂಭವಾಗಲಿದೆ.

ಇದು ಜಾನುವಾರುಗಳ ಹಾಸ್ಟೆಲ್ ಆಗಿರಲಿದೆ. ತಮ್ಮ ಜಾನುವಾರುಗಳನ್ನು ಸಾಕಲು ಸ್ಥಳಾವಕಾಶ ಇಲ್ಲದ ರೈತರು ಅವುಗಳನ್ನು ತಂದು ಇಲ್ಲಿ ಬಿಡಬಹುದು, ಇಲ್ಲಿಯೇ ಆಹಾರ, ಇಲ್ಲಿಯೇ ಹಾಲು ಕರೆಯಬಹುದು, ಯಾವಾಗ ಬೇಕಾದರೂ ವಾಪಾಸ್ ಕರೆದುಕೊಂಡು ಹೋಗಬಹುದು. ರೋಗಗಳಿರುವ ಜಾನುವಾರುಗಳಿಗೂ ಇಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ತಿಂಗಳ ಬಾಡಿಗೆ ರೀತಿ ವ್ಯವಸ್ಥೆ ಮಾಡಲಾಗಿದ್ದು, ಬಾಡಿಗೆ ನಿರ್ಧಾರಕ್ಕೆ ಶೀಘ್ರವೇ ಸಮಿತಿ ರಚನೆ ಮಾಡಲಾಗುವುದು.

ಗದಗದಲ್ಲಿ ಸಾಕಷ್ಟು ರೈತರಿಗೆ ಜಾನುವಾರುಗಳನ್ನು ಸಾಕಲು ಸೌಕರ್ಯ, ಸ್ಥಳದ ಕೊರತೆ ಇದೆ. ಇನ್ನು ಜಾನುವಾರುಗಳು ಇವೆ, ಆದರೆ ಅದನ್ನು ಸಾಕುವ ಪರಿ ಅಷ್ಟು ತಿಳಿದಿಲ್ಲ ಎನ್ನುವವರಿಗೂ ಇದು ಅನುಕೂಲವಾಗಲಿದೆ. ಸಾಮಾನ್ಯ ಜಾನುವಾರುಗಳಿಗೆ ಶೆಡ್ ಹಾಗೂ ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಪ್ರತ್ಯೇಕ ಸೌಕರ್ಯ ಇದೆ. ಒಂದು ಕ್ಲಿನಿಕ್, ಸ್ಟೋರ್ ರೂಂ, ಹಾಲು ಶೇಖರಣೆಗೆ ಸ್ಥಳ, ನೀರಿನ ಟ್ಯಾಂಕ್, ಸಗಣಿ ಸಂಗ್ರಹ ಸ್ಥಳವೂ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!