ಹೊಸ ದಿಗಂತ ವರದಿ , ಶಿವಮೊಗ್ಗ :
ಗಣಿ ಅಧಿಕಾರಿ ಪ್ರತಿಮಾ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದು ತೀರ್ಥಹಳ್ಳಿ ಪಟ್ಪ್ರಟಣದ ಹಿಂದೂ ರುದ್ರ ಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ಸೊಮವಾರ ನಡೆಯಿತು.
ಪಟ್ಟಣದ ಸಮೀಪದ ತುಡುಕಿಯ ಅವರ ಹೊಸ ಮನೆಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಿ ನಂತರ ಕುರುವಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರತಿಮಾ ಪುತ್ರ ಪಾರ್ಥನಿಂದ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿಸಲಾಯಿತು.
ಸಂಸಾರ ಚೆನ್ನಾಗಿತ್ತು…
ಈ ವೇಳೆ ಕುಟುಂಬಸ್ಥರು ಮಾತನಾಡಿ, ಪ್ರತಿಮಾ ಸಾವಿಗೆ ಕಾರಣರಾವರಿಗೆ ಸೂಕ್ತ ಶಿಕ್ಷೆ ನೀಡಬೇಕು. ದಕ್ಷ ಅಧಿಕಾರಿ ಹಾಗೂ ಪ್ರತಿಭಾವಂತ ಹೆಣ್ಣು ಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಸುಳ್ಳು ಸುದ್ಧಿಗಳಿಗೆ ಜನರು ಕಿವಿಕೊಡಬೇಡಿ. ಅವರ ಕುಟುಂಬ ಅನ್ಯೋನ್ಯವಾಗಿತ್ತು. ದಂಪತಿಗಳು ತುಂಬಾ ಚನ್ನಾಗಿ ಇದ್ದರು.
ಇಂತಹ ದಕ್ಷ ಅಧಿಕಾರಿಗಳನ್ನು ನಾವು ಕಳೆದುಕೊಂಡ ಬಡವರಾಗಿದ್ದೇವೆ. ಎಲ್ಲರಿಗೂ ಪ್ರತಿಮಾ ಮಾದರಿಯಾಗಿದ್ದರು ಎಂದರು.
ಪ್ರತಿಮಾ ಅಂತ್ಯಸಂಸ್ಕಾರದಲ್ಲಿ ಬಂಧು- ಬಳಗದವರು, ಗ್ರಾಮಸ್ಥರು ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.